ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಬುಷ್ ಶೂ'ಗೆ ಭಾರೀ ಡಿಮ್ಯಾಂಡ್: ಬೇಡಿಕೆಯ ಮಹಾಪೂರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಬುಷ್ ಶೂ'ಗೆ ಭಾರೀ ಡಿಮ್ಯಾಂಡ್: ಬೇಡಿಕೆಯ ಮಹಾಪೂರ
PTI
ವಿಶ್ವಾದ್ಯಂತ ಅತ್ಯಂತ ಕುಖ್ಯಾತವಾಗಿರುವ ಕಪ್ಪು ಲೆದರ್ ಶೂಗಳು ತುರ್ಕಿಯಲ್ಲಿ 100 ಜನರಿಗೆ ಉದ್ಯೋಗವಕಾಶವನ್ನು ಸಹ ಸೃಷ್ಟಿಸಿ ಕೊಟ್ಟಿದೆ.

ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರ ಮೇಲೆ ಇರಾಕಿ ಪತ್ರಕರ್ತ ಮುಂತಜಿರ್ ಅಲ್ ಜೈದಿ, ಈ ಶೂಗಳನ್ನು ಎಸೆದಿದ್ದು ಆತ ಜೈಲು ಸೇರುವಂತೆ ಮಾಡಿದ್ದರೂ ಬೂಟುಗಳ ತಯಾರಕನಿಗೆ ಕನಸಲ್ಲೂ ನೆನೆಸಿರದ ಬಂಪರ್ ತಂದುಕೊಟ್ಟಿವೆ.

ಈ ಘಟನೆಯ ನಂತರ ಬೇದಾನ್ ಶೂ ಕಂಪೆನಿಯ ಮಾಲಕ ರಾಮಜಾನ್ ಬೇದಾನ್ ಅವರ ಬಳಿ ವಿಶ್ವದೆಲ್ಲೆಡೆಯಿಂದ ಬೂಟುಗಳಿಗಾಗಿ ಅರ್ಡರ್‌ಗಳು ಹರಿದುಬರುತ್ತಿವೆ.

ಬೇದಾನ್ ತಮ್ಮ ವಾರ್ಷಿಕ ಮಾರಾಟಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಿರುವ ಬೇಡಿಕೆಯನ್ನು ಪೂರೈಸಲು 100 ಹೆಚ್ಚುವರಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಬೇದಾನ್ ಅವರ ಬಳಿ 271ಮಾಡೆಲ್‌ನ ಬೂಟುಗಳಿಗಾಗಿ 300,000 ಸೆಟ್‌ಗೆ ಬೇಡಿಕೆ ಇದೆ ಎಂದು ದ ಗಾರ್ಡಿಯನ್ ವರದಿ ಮಾಡಿದೆ.

ಅಮೆರಿಕ, ಬ್ರಿಟನ್ ಮತ್ತು ನೆರೆಯ ಮುಸ್ಲಿಂ ರಾಷ್ಟ್ರಗಳಿಂದ ಹೆಚ್ಚಿನ ಬೇಡಿಕೆ ಎಂದು ಅವರು ಹೇಳಿದ್ದಾರೆ.

ಜೈದಿ ಕೃತ್ಯಕ್ಕೆ ಬೆಂಬಲ ಸೂಚಿಸುವವರು ಹೆಚ್ಚಿದ್ದು, ಮಾರುಕಟ್ಟೆಯ ಮೂಡ್‌ಗೆ ಸರಿಹೊಂದುವಂತೆ ಬೂಟಿನ ಮಾಡೆಲ್‌ಗೆ "ಬುಷ್ ಶೂ" ಅಥವಾ "ಬೈ ಬೈ ಬುಷ್" ಎಂದು ಮರುನಾಮಕರಣ ಮಾಡುವ ಬಗ್ಗೆ ಬೇದಾನ್ ಯೋಜಿಸುತ್ತಿದ್ದಾರೆ.

"ನಾವು ಈ ಬೂಟುಗಳನ್ನು ವರ್ಷಾನುಗಟ್ಟಲೆಯಿಂದ ಮಾರಾಟ ಮಾಡುತ್ತಿದ್ದೇವೆ ಆದರೆ ಈಗ ಬುಷ್ ಕೃಪೆಯಿಂದ ಬೇಡಿಕೆ, ಹುಚ್ಚು ಪ್ರವಾಹದಂತೆ ಹರಿದು ಬರುತ್ತಿದೆ. ನಾವು ದೂರದರ್ಶನ ಜಾಹೀರಾತುಗಳನ್ನು ನೋಡಿಕೊಳ್ಳುಲು ಒಂದು ಸಂಸ್ಥೆಯನ್ನು ಸಹ ಯೋಜಿಸಿದ್ದೇವೆ" ಎಂದು ಬೇದಾನ್ ಹೇಳಿದ್ದಾಗಿ ಬ್ರಿಟಿಷ್ ಸುದ್ದಿ ಪತ್ರಿಕೆ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೀಗಿರುತ್ತದಂತೆ ಭಯೋತ್ಪಾದಕರ ಕನಸಿನ ಭಾರತ!
'ವಿಶ್ವದ 50 ಪ್ರಭಾವಿಗಳಲ್ಲಿ ಸೋನಿಯಾ, ಶಾರುಖ್'
ಹುಟ್ಟುಹಬ್ಬ ಔತಣಕೂಟಕ್ಕೆ ದಾವೂದ್ ತಯಾರಿ
ಜಮಾತ್ ನಿಷೇಧ ರದ್ದು ಪಡಿಸಬೇಕು: ಪಾಕ್ ಪಕ್ಷಗಳು
ಸಾವಿನಂಚಿನಲ್ಲಿ ಪಾಪ್ ಸಿಂಗರ್ ಮೈಕಲ್ ಜಾಕ್ಸನ್?
ಇರಾಕಿ ಸೈನಿಕನನ್ನು ಬಲಿತೆಗೆದುಕೊಂಡ 'ಸಾವಿನ್ನಪ್ಪುಗೆ'