ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ ಉನ್ನತ ಮಿಲಿಟರಿ ಅಧಿಕಾರಿ ಪಾಕ್‌ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಉನ್ನತ ಮಿಲಿಟರಿ ಅಧಿಕಾರಿ ಪಾಕ್‌ಗೆ
ಮುಂಬಯಿ ದಾಳಿಗೆ ಕಾರಣಕರ್ತರಾದ ಉಗ್ರವಾದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ನವದೆಹಲಿಯ ಒತ್ತಡ ಹೆಚ್ಚುತ್ತಿರುವಂತೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಬಿಗುವಿನ ವಾತಾವರಣವನ್ನು ಸಡಿಲಿಸಲು ಪಾಕಿಸ್ತಾನದ ರಾಜಕೀಯ ನೇತಾರರೊಂದಿಗೆ ಮಾತುಕತೆ ನಡೆಸಲು ಅಮೆರಿಕ ತನ್ನ ಉನ್ನತ ಮಿಲಿಟರಿ ಅಧಿಕಾರಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ.

ಮುಂಬಯಿ ದಾಳಿಯ ನಂತರ ಎರಡನೇ ಬಾರಿಗೆ ಪೂರ್ವ ಯೋಜನೆಯಿಲ್ಲದೆ ಅಮೆರಿಕದ ಜಂಟಿ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲ್ಲನ್ ಸೋಮವಾರ ಪಾಕಿಸ್ತಾನ ತಲುಪಿದ್ದಾರೆ.

ಮುಲ್ಲನ್ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಮಿಲಿಟರಿ ಮುಖ್ಯಸ್ಥ ಜನರಲ್ ಅಸ್ಫಾಕ್ ಪರವೇಜ್ ಕಯಾನಿ ಅವರು ಭೇಟಿಯಾಗಲಿದ್ದಾರೆ. ಇತ್ತೀಚಿಗಷ್ಟೇ ತನ್ನ ಗಡಿಯೊಳಗಿರುವ ಉಗ್ರವಾದಿಗಳನ್ನು ಮಟ್ಟ ಹಾಕಲು ಪಾಕಿಸ್ತಾನ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಮೆರಿಕ ಟೀಕಿಸಿತ್ತು.

ಮುಲ್ಲನ್ ಪಾಕಿಸ್ತಾನದಲ್ಲಿ ಬಂದಿಳಿದ ನಂತರ ಪಾಕ್‌ನ ರಾಷ್ಟ್ರೀಯ ರಕ್ಷಣಾ ಸಲಹಗಾರ ಮೆಹಮೂದ್ ಅಲಿ ದುರಾನಿ ಅವರನ್ನು ಭೇಟಿಯಾಗಿದ್ದಾರೆ.

ಈ ಮೊದಲು, ಮುಂಬಯಿ ದಾಳಿಯ ಬೆನ್ನಲ್ಲೆ ಅಡ್ಮಿರಲ್ ಮುಲ್ಲನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂಬಯಿ ದಾಳಿಯಲ್ಲಿ ಪಾತ್ರವಹಿಸಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಅವರ ಪಾಕ್‌ಗೆ ತಿಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಬುಷ್ ಶೂ'ಗೆ ಭಾರೀ ಡಿಮ್ಯಾಂಡ್: ಬೇಡಿಕೆಯ ಮಹಾಪೂರ
ಹೀಗಿರುತ್ತದಂತೆ ಭಯೋತ್ಪಾದಕರ ಕನಸಿನ ಭಾರತ!
'ವಿಶ್ವದ 50 ಪ್ರಭಾವಿಗಳಲ್ಲಿ ಸೋನಿಯಾ, ಶಾರುಖ್'
ಹುಟ್ಟುಹಬ್ಬ ಔತಣಕೂಟಕ್ಕೆ ದಾವೂದ್ ತಯಾರಿ
ಜಮಾತ್ ನಿಷೇಧ ರದ್ದು ಪಡಿಸಬೇಕು: ಪಾಕ್ ಪಕ್ಷಗಳು
ಸಾವಿನಂಚಿನಲ್ಲಿ ಪಾಪ್ ಸಿಂಗರ್ ಮೈಕಲ್ ಜಾಕ್ಸನ್?