ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜೀವಭಯ ತೊರೆದು ಬೂಟು ಎಸೆದಿದ್ದ ಜೈದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೀವಭಯ ತೊರೆದು ಬೂಟು ಎಸೆದಿದ್ದ ಜೈದಿ
ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರ ಮೇಲೆ ಬೂಟು ಎಸೆದ ಪತ್ರಕರ್ತ ಮುಂತಜಿರ್ ಅಲ್ ಜೈದಿ ಅವರಿಗೆ ಮೊದಲ ಶೂ ಎಸೆಯುತ್ತಲೆ ತನ್ನ ಮೇಲೆ ಗುಂಡಿನ ಮಳೆಗರೆದು ಕೊಲ್ಲಲಾಗಬಹುದು ಎಂಬ ಸಂದೇಹವಿತ್ತು.

ಜೈದಿ ಅವರ ಸೋದರ ಉದಯ್ ಅಲ್ ಜೈದಿ ತಮ್ಮ ಸಹೋದರ ಪ್ರಾಣಭಯವನ್ನೂ ತೊರೆದು ಈ ಕಾರ್ಯ ಮಾಡಿದ್ದಾಗಿ ಹೇಳಿದ್ದಾರೆ. ಜೈದಿ ತಮ್ಮ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಬಳಿ ಈ ವಿಷಯ ತಿಳಿಸಿದ್ದಾಗಿ ಉದಯ್ ತಿಳಿಸಿದ್ದಾರೆ.

ಬೂಟು ಪ್ರಕರಣದ ನ್ಯಾಯಾಲಯ ವಿಚಾರಣೆ ಡಿಸೆಂಬರ್ 31ರಂದು ನಡೆಯಲಿದೆ ಎಂದು ಇರಾಕ್‌ನ ಹೈ ಜ್ಯುಡಿಶೀಯಲ್ ಕೌನ್ಸಿಲ್‌ನ ವಕ್ತಾರ ಅಬ್ದುಲ್ ಸತ್ತಾರ್ ಬಿರ್ಗರ್ದ್ ತಿಳಿಸಿದ್ದಾರೆ. ಜೈದಿ ಮೇಲೆ ಇರಾಕ್ ಪ್ರವಾಸಕ್ಕೆ ಆಗಮಿಸಿದ ವಿದೇಶಿ ರಾಷ್ಟ್ರಧ್ಯಕ್ಷರನ್ನು ಅವಮಾನಿಸಿದ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನ್ಯಾಯಾಲಯ ವಿಚಾರಣೆಯ ಪೂರ್ಣ ಕವರೇಜ್ ಮಾಡಲು ಮಾಧ್ಯಮಗಳಿಗೆ ಅನುಮತಿ ನೀಡಲಾಗಿದೆ.

ಜೈದಿ ಅವರನ್ನು ನಿರ್ದಯೆಯಿಂದ ಹಿಂಸಿಸಲಾಗಿದೆ ಎಂದು ಜೈದಿ ಅವರ ವಕೀಲರು ಹೇಳಿದ್ದಾರೆ. ಬಾಗ್ದಾದ್‌ನ ಗ್ರೀನ್ ಜೋನ್‌ನ ರಹಸ್ಯ ತಾಣದಲ್ಲಿ ಜೈದಿ ಅವರನ್ನು ನೋಡಲು ಅವರ ಸೋದರನಿಗೆ ಅವಕಾಶ ನೀಡಲಾಗಿತ್ತು.

ಜೈದಿ ಅವರ ಸೋದರ, ಅವರ ಮುಖ ಮತ್ತು ಶರೀರದಲ್ಲಿ ಆಳವಾದ ಗಾಯದ ಗುರುತುಗಳಿದ್ದವು ಎಂದು ಹೇಳಿದ್ದಾರೆ. ಅವರ ಒಂದು ಹಲ್ಲು ಮಾಯವಾಗಿತ್ತು ಮತ್ತು ಮೂಗಿನ ಮೇಲೆ ಗಾಯದ ಗುರುತುಗಳಿದ್ದವು, ಇದರ ಹೊರತಾಗಿ ಕೈ ಮತ್ತು ಕಾಲುಗಳಲ್ಲಿಯೂ ಆಳವಾದ ಗಾಯದ ಗುರುತುಗಳಿದ್ದವು ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಡಿರೇಖೆಯಲ್ಲಿ ಪಾಕ್ ವಾಯುಸೇನಾ ಅಭ್ಯಾಸ
ಅಮೆರಿಕ ಉನ್ನತ ಮಿಲಿಟರಿ ಅಧಿಕಾರಿ ಪಾಕ್‌ಗೆ
'ಬುಷ್ ಶೂ'ಗೆ ಭಾರೀ ಡಿಮ್ಯಾಂಡ್: ಬೇಡಿಕೆಯ ಮಹಾಪೂರ
ಹೀಗಿರುತ್ತದಂತೆ ಭಯೋತ್ಪಾದಕರ ಕನಸಿನ ಭಾರತ!
'ವಿಶ್ವದ 50 ಪ್ರಭಾವಿಗಳಲ್ಲಿ ಸೋನಿಯಾ, ಶಾರುಖ್'
ಹುಟ್ಟುಹಬ್ಬ ಔತಣಕೂಟಕ್ಕೆ ದಾವೂದ್ ತಯಾರಿ