ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'
'ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದೆ!', ಪಾಕಿಸ್ತಾನದ ವಾಯುಪಡೆ ಅಭ್ಯಾಸಾರ್ಥವಾಗಿ ಲಾಹೋರ್ ಮತ್ತು ರಾವಲ್ಪಿಂಡಿ ನಗರಗಳ ಮೇಲೆ ಹಾರಾಟ ಪ್ರಾರಂಭಿಸುತ್ತಿದ್ದಂತಯೇ ಪಾಕ್‌ನಲ್ಲಿ ಹರಡಿದ ಸುದ್ದಿಯಿದು.

ಕೂಡಲೇ ದೂರದರ್ಶನ ಮಾಧ್ಯಮಗಳು ವದಂತಿಯನ್ನು ನಿರರ್ಥಕಗೊಳಿಸಲು, ಭಾರತ ನೀಡುತ್ತಿರುವ ಎಚ್ಚರಿಕೆಗಳ ಹಿನ್ನಲೆ ಪಾಕ್ ವಾಯುಪಡೆ ಹೈ ಅಲರ್ಟ್‌ನಲ್ಲಿದೆಯಷ್ಟೇ ಎಂಬ ಪಾಕ್ ಅಧಿಕಾರಿಗಳ ಹೇಳಿಕೆಗಳನ್ನು ಪ್ರಸಾರಿಸಿದವು.

ಆದರೆ, ರಾವಲ್ಪಿಂಡಿ ಮತ್ತು ಲಾಹೋರ್‌ ನಗರಗಳ ಮೇಲೆ ಫೈಟರ್ ಜೆಟ್‌ಗಳ ಹಾರಾಟ ಜನರನ್ನು ಭಯಭೀತರನ್ನಾಗಿಸಿ, ಮನೆಗಳಿಂದ ಹೊರಬರುವಂತೆ ಮಾಡಿತು.

ಕ್ಷಿಪ್ರವಾಗಿ ಸುದ್ದಿ ಪ್ರಸಾರಿಸುವ ಮಾಧ್ಯಮವಾದ ಮೊಬೈಲ್ ಫೋನ್‌ಗಳಲ್ಲಿ ಪಿಎಎಫ್ ಜೆಟ್‌ಗಳು ಭಾರತದ ಆಕ್ರಮಣವನ್ನು ಎದುರಿಸುತ್ತಿವೆ ಎಂಬ ಸುದ್ದಿ ಹರಿದಾಡಿತು. ಕೆಲವು ಸುದ್ದಿಗಳಲ್ಲಿ ಭಾರತ ಜಿಹಾದಿ ಗುಂಪುಗಳ ಮೇಲೆ ದಾಳಿ ಮಾಡಿದೆ ಎಂದು ಪ್ರಸಾರವಾದವು.

ಕೂಡಲೇ ಬಹಳಷ್ಟು ಪಾಕಿಸ್ತಾನಿಗಳು ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಮಾಧ್ಯಮಗಳಿಗೆ ಫೋನಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ಆಕ್ರಮಿಸಿದ ಕ್ಷಣವೇ ಪ್ರತಿಕ್ರಿಯೆಗೆ ಸಿದ್ಧ: ಪಾಕ್
ದೇಶವನ್ನು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ: ಗಿಲಾನಿ
ಜೀವಭಯ ತೊರೆದು ಬೂಟು ಎಸೆದಿದ್ದ ಜೈದಿ
ಪಾಕ್ ವಾಯುಸೇನಾ ಅಭ್ಯಾಸ: ನಾಗರೀಕ ವಿಮಾನಯಾನ ವಿಳಂಬ
ಅಮೆರಿಕ ಉನ್ನತ ಮಿಲಿಟರಿ ಅಧಿಕಾರಿ ಪಾಕ್‌ಗೆ
'ಬುಷ್ ಶೂ'ಗೆ ಭಾರೀ ಡಿಮ್ಯಾಂಡ್: ಬೇಡಿಕೆಯ ಮಹಾಪೂರ