ನಿಷೇಧಿತ ಉಗ್ರ ಸಂಘಟನೆ ಜಮಾತ್-ಉದ್-ದಾವಾದ ಎರಡು ವೆಬ್‌ಸೈಟ್‌ಗಳು ಇನ್ನೂ ಕಾರ್ಯಾಚರಿಸುತ್ತಿವೆ.
ಒಂದು ವೆಬ್‌ಸೈಟ್ ಇಂಗ್ಲೀಷ್‌ನಲ್ಲಿದ್ದರೆ ಇನ್ನೊಂದು ಉರ್ದುವಿನಲ್ಲಿದೆ. ಈ ವೆಬ್‌ಸೈಟ್‌ಗಳು ಅಮೆರಿಕನ್ ಕಂಪೆನಿಗಳ ಅಧೀನದಲ್ಲಿದೆ.
ಇಂಟರ್‌ನೆಟ್ ಮೂಲಕ ಉಗ್ರವಾದಿ ಸಂಘಟನೆಗಳ ವಿರುದ್ಧ ಹೋರಾಡುವ ಜಿವಿಸ್ ಗ್ರೂಪ್ ಈ ವೆಬ್‌ಸೈಟ್‌ಗಳನ್ನು ಬೆಳಕಿಗೆ ತಂದಿದೆ.
ಇಂಗ್ಲೀಷ್ ವೆಬ್‌ಸೈಟ್‌ನಲ್ಲಿ ಕಳೆದ ಒಂಬತ್ತು ದಿನಗಳಿಂದ 14 ಪೋಸ್ಟ್‌ಗಳನ್ನು ಮಾಡಲಾಗಿದೆ ಮತ್ತು ಅವುಗಳಲ್ಲಿ ಒಂದು ಕವನದ ತಲೆಬರಹ 'ಕನಸಿನಲ್ಲಿ ಮನಮೋಹನ್ ಸಿಂಗ್ ಮತ್ತು ಜೆಯುಡಿ'.
ಅಮೆರಿಕನ್ ಕಂಪೆನಿಗಳು, ಲಷ್ಕರೆ ತೊಯ್ಬಾದ ಹೊರಸಂಸ್ಥೆಯಾಗಿರುವ ಜಮಾತ್-ಉದ್-ದಾವಾಗೆ ವೆಬ್‌ಸೈಟ್ ಸೇವೆ ಒದಗಿಸುವುದು ಕಾನೂನು ಬಾಹಿರ. ಆದರೆ ವಿಶ್ವಸಂಸ್ಥೆಯ ನಿಷೇಧದ ಹೊರತಾಗಿಯೂ ಜಮಾತ್ ವೆಬ್‌ಸೈಟ್‌ಗಳನ್ನು ನಿಷ್ಕ್ರೀಯಗೊಳಿಸಲಾಗಿಲ್ಲ. |