ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯುದ್ಧ ನಡೆದರೆ ತಾಲಿಬಾನ್‌ನಿಂದ ಪಾಕ್‌ಗೆ ಬೆಂಬಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುದ್ಧ ನಡೆದರೆ ತಾಲಿಬಾನ್‌ನಿಂದ ಪಾಕ್‌ಗೆ ಬೆಂಬಲ
ಅಫ್ಘಾನಿಸ್ತಾನದಲ್ಲಿ ಉಗ್ರವಾದಿ ಕೃತ್ಯಗಳಿಗಾಗಿ ಅಮೆರಿಕ ಮತ್ತು ನಾಟೊ ಪಡೆಗಳು ಬೆಂಬತ್ತಿರುವ ತಾಲಿಬಾನ್ ಸಂಘಟನೆ, ಭಾರತದೊಂದಿಗೆ ಯುದ್ಧ ನಡೆದಲ್ಲಿ ನೂರಾರು ಆತ್ಮಾಹುತಿ ಬಾಂಬ್ ದಾಳಿಕೋರರ ಮೂಲಕ ತಾಲಿಬಾನ್ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲಿದೆ ಎಂದು ಮಂಗಳವಾರ ಘೋಷಿಸಿದೆ.

"ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಬಂದರೆ ನಮ್ಮ ಸಾವಿರಾರು ಸಶಸ್ತೃ ಉಗ್ರರು ಪಾಕ್ ಸೇನೆಯೊಂದಿಗೆ ಯುದ್ದಕ್ಕಿಳಿಯಲಿದ್ದಾರೆ" ಎಂದು ತರೀಕ್-ಎ-ತಾಲಿಬಾನ್ ಮುಖ್ಯಸ್ಥ ಬೈಟುಲ್ಲಾ ಮೆಹಸೂದ್ ದೈನಿಕ ಸುದ್ದಿ ಪತ್ರಿಕೆಗೆ ರಹಸ್ಯ ತಾಣದಿಂದ ಕರೆ ಮಾಡಿ ತಿಳಿಸಿದ್ದಾನೆ.

"ಭಾರತೀಯ ಸೇನೆಗಳು ಯಾವುದೇ ರೀತಿಯ ಆಕ್ರಾಮಕತೆ ತೋರ್ಪಡಿಸಿದಲ್ಲಿ ಗಡಿರೇಖೆಯ ಬಳಿ ರಕ್ಷಣೆಗಾಗಿ ನೂರಾರು ಆತ್ಮಾಹುತಿ ದಾಳಿಕೋರರಿಗೆ ಸುಸೈಡ್ ಜಾಕೆಟ್‌ಗಳನ್ನು ಮತ್ತು ಸ್ಪೋಟಕ ಲಾಡೆನ್ ವಾಹನಗಳನ್ನು ನೀಡಲಾಗಿದೆ ಮತ್ತು ನೀಡಲಾಗುತ್ತದೆ" ಎಂದು ಆತ ತಿಳಿಸಿದ್ದಾನೆ.

"ತಾಲಿಬಾನ್ ಬಹು ಸಮಯದಿಂದ ನಿರೀಕ್ಷೆಯಲ್ಲಿದ್ದ ನಿಜವಾದ ಜಿಹಾದ್‌ಗೆ ಸಮಯ ಒದಗಿ ಬಂದಿದೆ" ಎಂದು ಪಾಕಿಸ್ತಾನ ಮತ್ತು ಅಮೆರಿಕ ಪಡೆಗಳಿಗೆ ಬೇಕಾಗಿರುವ ಮಹಸೂದ್ ಹೇಳಿದ್ದಾನೆ.

"ಏಕೈಕ ಇಸ್ಲಾಮಿಕ್ ನ್ಯೂಕ್ಷಿಯರ್ ಪವರ್ ಹೊಂದಿರುವ ರಾಷ್ಟ್ರವನ್ನು ನಿಶಕ್ತಗೊಳಿಸಲು ಗೋಚರ ಮತ್ತು ಅಗೋಚರವಾದ ಶತ್ರುಗಳು ಪ್ರಯತ್ನಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಆದರೆ ಶತ್ರುಗಳ ಈ ಎಲ್ಲಾ ನ್ಯಾಯಸಮ್ಮತವಲ್ಲದ ಯೋಜನೆಗಳನ್ನು ಮುಜಾಹಿದ್ದೀನ್ ವಿಫಲಗೊಳಿಸುತ್ತದೆ" ಎಂದು ಆತ ಹೇಳಿದ್ದಾನೆ.

ಅಫ್ಘನ್-ಪಾಕ್ ಗಡಿರೇಖೆಯ ಬಳಿ ತಾಲಿಬಾನ್ ಸಾವಿರಾರು ಬಂಡುಕೋರರನ್ನು ಅಣಿಗೊಳಿಸಿದೆ ಎಂದು ಇದೇ ಮೊದಲ ಬಾರಿಗೆ ಮೆಹಸೂದ್ ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನ ಸೇನಾಪಡೆ ಈ ಬಂಡುಕೋರರನ್ನು ದಮನಗೊಳಿಸಲು ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ.

ಉಗ್ರವಾದಿಗಳು ಪಾಕ್‌ ಸೇನೆಯೊಂದಿಗೆ ಹೋರಾಡುತ್ತಾ ಬಂದಿರುವುದರಿಂದ ಪಾಕಿಸ್ತಾನ ಸೇನೆಯೊಂದಿಗೆ ತಾಲಿಬಾನ್ ಹೇಗೆ ಹೋರಾಡುತ್ತದೆ ಎಂದು ಜನ ಪ್ರಶ್ನಿಸಬಹುದು ಎಂದು ಸಹ ಮೆಹಸೂದ್ ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಕ್ರೀಯವಾಗಿರುವ ಜಮಾತ್ ವೆಬ್‌ಸೈಟ್
ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'
ಭಾರತಕ್ಕೆ ಉತ್ತರ ನೀಡಲು ನಾವ್ ರೆಡಿ: ಪಾಕ್ ಸೇನೆ
ದೇಶವನ್ನು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ: ಗಿಲಾನಿ
ಜೀವಭಯ ತೊರೆದು ಬೂಟು ಎಸೆದಿದ್ದ ಜೈದಿ
ಪಾಕ್ ವಾಯುಸೇನಾ ಅಭ್ಯಾಸ: ನಾಗರೀಕ ವಿಮಾನಯಾನ ವಿಳಂಬ