ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನಮ್ಮ ದಾಖಲೆಗಳಲ್ಲಿ ಕಸಬ್ ಅಸ್ತಿತ್ವವೇ ಇಲ್ಲ: ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಮ್ಮ ದಾಖಲೆಗಳಲ್ಲಿ ಕಸಬ್ ಅಸ್ತಿತ್ವವೇ ಇಲ್ಲ: ಪಾಕ್
ಅಧಿಕೃತ ದಾಖಲೆಗಳಲ್ಲಿ ಅಜ್ಮಲ್ ಅಮೀರ್ ಕಸಬ್ ಎಂಬ ಹೆಸರಿನ ಪಾಕಿಸ್ತಾನೀ ರಾಷ್ಟ್ರೀಯನೊಬ್ಬನ ಇರುವಿಕೆ ಅಸ್ತಿತ್ವದಲ್ಲೇ ಇಲ್ಲ ಎಂದು ಪಾಕಿಸ್ತಾನ ಮಂಗಳವಾರ ಹೇಳಿದೆ. ಆದರೆ, ತನಗೆ ಕಾನೂನು ಸಹಾಯ ನೀಡಬೇಕೆಂದು ಕೋರಿ ಕಸಬ್ ಬರೆದಿದ್ದ ಪತ್ರಕ್ಕೆ ಬುಧವಾರ ಪ್ರತಿಕ್ರಿಯಿಸುವುದಾಗಿ ಹೇಳಿದೆ.

ರಾಷ್ಟ್ರೀಯ ಮಾಹಿತಿಸಂಚಯ ಮತ್ತು ನೋಂದಣಿ ಪ್ರಾಧಿಕಾರ (ಎನ್ಎಡಿಆರ್ಎ) ಈ ಕುರಿತು ಪರಿಶೀಲನೆ ನಡೆಸಿದ್ದು, ಅಜ್ಮಲ್ ಅಮೀರ್ ಇಮಾನ್ ಆಲಿಯಾಸ್ ಅಜ್ಮಲ್ ಕಸಬ್ ಹೆಸರಿನ ಯಾವುದೇ ರಾಷ್ಟ್ರೀಯನೂ ಪಾಕಿಸ್ತಾನದಲ್ಲಿ ಇರಲಿಲ್ಲ ಎಂದು ಆಂತರಿಕ ಸಚಿವಾಲಯದ ಮುಖ್ಯಸ್ಥ ರೆಹಮಾನ್ ಮಲಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಜ್ಮಲ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳೂ ಎನ್ಎಡಿಆರ್ಎ ಪ್ರಾಧಿಕಾರದಲ್ಲಿ ಇಲ್ಲ ಎಂದು ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಇಂಟರ್‌ಪೋಲ್ ಮುಖ್ಯಸ್ಥ ರೊನಾಲ್ಡ್ ಕೆ. ನೋಬಲ್ ಅವರನ್ನು ಭೇಟಿಯಾದ ಬಳಿಕ ರಹಮಾನ್ ಮಲಿಕ್ ಸುದ್ದಿಗಾರರಿಗೆ ತಿಳಿಸಿದರು.

ಅಜ್ಮಲ್ ಬರೆದಿದ್ದಾನೆ ಎನ್ನಲಾಗುತ್ತಿರುವ ಪತ್ರವೊಂದು ಭಾರತದಲ್ಲಿರುವ ಪಾಕಿಸ್ತಾನೀ ಹೈಕಮಿಶನ್‌ಗೆ ಬಂದಿದೆ. ಈ ಪತ್ರದ ಬಗ್ಗೆ ವಿವರವಾದ ಉತ್ತರವನ್ನು ಬುಧವಾರ ನೀಡುತ್ತೇವೆ ಎಂದವರು ಹೇಳಿದರು.

ಲಷ್ಕರ್ ಇ ತೋಯ್ಬಾ ಈಗ ಅಸ್ತಿತ್ವದಲ್ಲೇ ಇಲ್ಲ. ಅದರ ಮತ್ತೊಂದು ರೂಪ ಎನ್ನಲಾಗುತ್ತಿರುವ ಜಮಾತ್ ಉದ್ ದಾವಾ ಬಗ್ಗೆ ನಾವು ನಡೆಸಿದ ತನಿಖೆಗಳು, ಅದು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಎತ್ತಿ ತೋರಿಸಿವೆ ಎಂದ ಅವರು, ಪಾಕಿಸ್ತಾನವು ಸಾರ್ವಭೌಮ ರಾಷ್ಟ್ರವಾಗಿದ್ದು, ನಾವೇನೂ ಮಾಡಿದರೂ ದೇಶದ ಹಿತದೃಷ್ಟಿಯಿಂದ ಮಾಡುತ್ತೇವೆ. ಬೇರೆಯವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಭಾರತವನ್ನು ಉಲ್ಲೇಖಿಸದೆ ರಹಮಾನ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುದ್ಧ ನಡೆದರೆ ತಾಲಿಬಾನ್‌ನಿಂದ ಪಾಕ್‌ಗೆ ಬೆಂಬಲ
ಸಕ್ರೀಯವಾಗಿರುವ ಜಮಾತ್ ವೆಬ್‌ಸೈಟ್
ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'
ಭಾರತಕ್ಕೆ ಉತ್ತರ ನೀಡಲು ನಾವ್ ರೆಡಿ: ಪಾಕ್ ಸೇನೆ
ದೇಶವನ್ನು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ: ಗಿಲಾನಿ
ಜೀವಭಯ ತೊರೆದು ಬೂಟು ಎಸೆದಿದ್ದ ಜೈದಿ