ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯುದ್ಧ ಬೇಡ, ನಡೆದರೆ ನಾವು ಸಿದ್ಧ: ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುದ್ಧ ಬೇಡ, ನಡೆದರೆ ನಾವು ಸಿದ್ಧ: ಪಾಕ್
ಪಾಕಿಸ್ತಾನದ ಉನ್ನತ ನಾಯಕರು ತಮಗೆ ಭಾರತದೊಂದಿಗೆ ಯುದ್ಧ ಬೇಕಾಗಿಲ್ಲ ಆದರೆ ನಮ್ಮ ಸದೃಢ ಸೇನಾಪಡೆ ಭಾರತದ ಕಡೆಯಿಂದ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.

ಭಾರತ, ಪಾಕಿಸ್ತಾನದ ಮಿಲಿಟರಿ ಸಾಮರ್ಥ್ಯವನ್ನು ಕಡೆಗಣಿಸಬಾರದು ಏಕೆಂದರೆ, ಇದು ಪೂರ್ವದಿಂದ ಯಾವುದೇ ಆಕ್ರಮಾಕತೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾಗಿ ಡಾನ್ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಪಾಕ್ ಸೇನಾಪಡೆ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಲು ಸಶಕ್ತವಾಗಿದೆ ಎಂದು ಅಧ್ಯಕ್ಷರೊಂದಿಗಿನ ಭೇಟಿಯ ಸಂದರ್ಭ ಸ್ಟಾಫ್ ಸಮಿತಿಯ ಜಂಟಿ ಮುಖ್ಯಸ್ಥ ಮಜಿದ್ ತಿಳಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಯೂಸಫ್ ರಜಾ ಗಿಲಾನಿ ಅವರು ಸಹ ಪಾಕಿಸ್ತಾನ ಭಾರತದೊಂದಿಗೆ ಯಾವುದೇ ವೈಶಮ್ಯವನ್ನು ಬಯಸುದಿಲ್ಲ ಎಂದು ಹೇಳಿದ್ದಾರೆ. "ಗಡಿರೇಖೆಯ ಬಳಿ ಉದ್ವಿಗ್ನತೆಯನ್ನು ಯಾರೂ ಬಯಸುವುದಿಲ್ಲ ಮತ್ತು ನಾವು ಜವಾಬ್ದಾರಿಯುತವಾಗಿ ಮತ್ತು ಎಚ್ಚರಿಕೆಯಿಂದ ಮುನ್ನಡೆಯುತ್ತಿದ್ದೇವೆ" ಎಂದು ಗಿಲಾನಿ ಗಿಲಾನಿ ವರದಿಗಾರರಲ್ಲಿ ಹೇಳಿದ್ದಾರೆ.

ಪಾಕಿಸ್ತಾನವನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ನಮ್ಮ ಮಿಲಿಟರಿ ಪಡೆಗಿದೆ ಮತ್ತು ಕಾರ್ಯಾಚರಣೆಗಿಳಿಯಲು ಸೇನಾಪಡೆಯು ಅತ್ಯುನ್ನತ ಮಟ್ಟದಲ್ಲಿ ಸಿದ್ಧತೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಮ್ಮ ದಾಖಲೆಗಳಲ್ಲಿ ಕಸಬ್ ಅಸ್ತಿತ್ವವೇ ಇಲ್ಲ: ಪಾಕ್
ಯುದ್ಧ ನಡೆದರೆ ತಾಲಿಬಾನ್‌ನಿಂದ ಪಾಕ್‌ಗೆ ಬೆಂಬಲ
ಸಕ್ರೀಯವಾಗಿರುವ ಜಮಾತ್ ವೆಬ್‌ಸೈಟ್
ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'
ಭಾರತಕ್ಕೆ ಉತ್ತರ ನೀಡಲು ನಾವ್ ರೆಡಿ: ಪಾಕ್ ಸೇನೆ
ದೇಶವನ್ನು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ: ಗಿಲಾನಿ