ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಸಬ್ ಪತ್ರದ ಬಗ್ಗೆ ಪಾಕ್ ಸಂಶಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಪತ್ರದ ಬಗ್ಗೆ ಪಾಕ್ ಸಂಶಯ
ಭಾರತೀಯ ಅಧಿಕಾರಿಗಳು ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್‌ನ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾ ಪಾಕಿಸ್ತಾನ ಸರಕಾರ ಸಣ್ಣ ಆಧಿಕೃತ ನೋಟ್ ಅನ್ನು ಬಿಡುಗಡೆ ಮಾಡಿದೆ.

ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಅವರ ಪತ್ರ ತಲುಪಿದೆ ಎಂದು ಒಪ್ಪಿಕೊಂಡಿರುವ ಇಸ್ಲಾಮಾಬಾದ್, ಪಾಕಿಸ್ತಾನದಲ್ಲಿ ಅಂತಹ ಯಾವುದೇ ವ್ಯಕ್ತಿಯಿದ್ದ ದಾಖಲೆಯೇ ಇಲ್ಲ ಎಂದಿದೆ.

ಪಾಕಿಸ್ತಾನದ ಸರಕಾರಿ ಮೂಲಗಳು ಎನ್‌ಡಿಟಿವಿಗೆ ತಿಳಿಸಿರುವಂತೆ;


ಪತ್ರದಲ್ಲಿ ದಿನಾಂಕ ಡಿಸೆಂಬರ್ 19 ಎಂದು ನಮೂದಾಗಿದೆ, ಹಾಗಿದ್ದರೆ ಮುಂಬಯಿ ಪೊಲೀಸರು ಪತ್ರವನ್ನು ಡಿಸೆಂಬರ್ 13ರಂದು ದೆಹಲಿಗೆ ಕಳುಹಿಸಿದ್ದೆವು ಎಂದು ಹೇಳಿದ್ದು ಹೇಗೆ ?

ವಿದೇಶಾಂಗ ಸಚಿವಾಲಯ ಪತ್ರದ ಪ್ರತಿಯನ್ನು ಕಳುಹಿಸಿದೆ, ಮೂಲ ಪತ್ರವನ್ನೇ ಏಕೆ ಕಳುಹಿಸಿಲ್ಲ ?

ಪತ್ರದಲ್ಲಿ ಪಾಕಿಸ್ತಾನಿ ಮಿಶನ್ ಕಸಬ್‌ಗೆ ವಕೀಲರನ್ನು ಕಳುಹಿಸುವಂತೆ ಕೋರಿದೆ.

ಪತ್ರದ ಭಾಷೆಯಲ್ಲಿ ಬಹಳಷ್ಟು ಅಸ್ಪಷ್ಟತೆಗಳಿವೆ.

ಹೈ ಕಮಿಶನ್ ಅನ್ನು 'ಎಂಬಸ್ಸಿ' (ದೂತಾವಾಸ) ಅಥವಾ 'ಸಿಫಾರತ್ ಖಾನಾ' ಬದಲು 'ವಕಾಲತ್' ಎನ್ನಲಾಗಿದೆ.

ಪತ್ರದಲ್ಲಿ ಎನ್‌ಕೌಂಟರ್‌ ಎನ್ನುವುದಕ್ಕೆ ಉರ್ದು ಪದವಾದ 'ಮುಕಾಬುಲಾ' ಬದಲು ಹಿಂದಿ ಪದ 'ಮುತ್‌ಭೇಡ್' ಎಂದು ಬಳಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುದ್ಧ ಬೇಡ, ನಡೆದರೆ ನಾವು ಸಿದ್ಧ: ಪಾಕ್
ನಮ್ಮ ದಾಖಲೆಗಳಲ್ಲಿ ಕಸಬ್ ಅಸ್ತಿತ್ವವೇ ಇಲ್ಲ: ಪಾಕ್
ಯುದ್ಧ ನಡೆದರೆ ತಾಲಿಬಾನ್‌ನಿಂದ ಪಾಕ್‌ಗೆ ಬೆಂಬಲ
ಸಕ್ರೀಯವಾಗಿರುವ ಜಮಾತ್ ವೆಬ್‌ಸೈಟ್
ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'
ಭಾರತಕ್ಕೆ ಉತ್ತರ ನೀಡಲು ನಾವ್ ರೆಡಿ: ಪಾಕ್ ಸೇನೆ