ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಡಿಸೆಂಬರ್ 26, ಪಾಕ್‌ಗೆ ಭಾರತ ನೀಡಿದ ಗಡುವು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿಸೆಂಬರ್ 26, ಪಾಕ್‌ಗೆ ಭಾರತ ನೀಡಿದ ಗಡುವು?
ಪಾಕಿಸ್ತಾನಕ್ಕೆ ತನ್ನ ನೆಲದಲ್ಲಿರುವ ಉಗ್ರರನ್ನು ದಮನ ಮಾಡಲು ಭಾರತ ಡಿಸೆಂಬರ್ 26ರ ಗಡುವು ನೀಡಿದೆ ಎಂದು ಜಿಯೊಪೊಲಿಟಿಕಲ್‌ ಇಂಟಲಿಜೆನ್ಸ್‌ನ ವರದಿ ಮಂಗಳವಾರ ತಿಳಿಸಿದೆ.

ಸ್ಟಾರ್ಟ್‌ಫಾರ್ ವರದಿಯ ಪ್ರಕಾರ, "ಭಾರತಕ್ಕೆ ಬೆದರಿಕೆಯೊಡ್ಡುವುದನ್ನು ಮುಂದುವರೆಸಿರುವ ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವ ಇಸ್ಲಾಮಿ ಉಗ್ರವಾದಿಗಳನ್ನು ಮಟ್ಟ ಹಾಕಲು 30ದಿನಗಳ ಕಾಲಾವಕಾಶ ನೀಡಲಾಗುತ್ತದೆ" ಎಂಬ ಸಂದೇಶವನ್ನು ನವೆಂಬರ್ 26ರ ಮುಂಬಯಿ ದಾಳಿಯ ನಂತರ ಭಾರತ ಅಮೆರಿಕ ಮೂಲಕ ಪಾಕಿಸ್ತಾನಕ್ಕೆ ರವಾನಿಸಿದೆ.

ಮುಂಬಯಿ ದಾಳಿ ನಡೆಸಿದ ಉಗ್ರರು ಪಾಕಿಸ್ತಾನಿಗಳು ಎಂಬುದನ್ನು ಪಾಕ್ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ.

"ನಮಗೆ ತಿಳಿದಿರುವಂತೆ ಪಾಕಿಸ್ತಾನಕ್ಕೆ ನೀಡಲಾದ ಕೊನೆಯ ಗಡುವು ಡಿಸೆಂಬರ್ 26, ಆದ್ದರಿಂದ ಪಾಕ್ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆ ನಡೆಸಬಹುದಾದ ಸಾಧ್ಯತೆ ಸನ್ನಿಹಿತವಾಗಿದೆ. ಪಾಕ್ ವಿರುದ್ದ ಮಿಲಿಟರಿ ಕಾರ್ಯಾಚರಣೆಗಾಗಿ ಸಿದ್ಧತೆಗಳನ್ನು ನಡೆಸಲು ಭಾರತದ ಬಳಿ ಒಂದು ತಿಂಗಳ ಸಮಯಾವಕಾಶವಿತ್ತು ಮತ್ತು ಈಗ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಿದ್ಧವಾಗಿವೆ ಎಂದು ಭಾರತೀಯ ಡಿಫೆನ್ಸ್ ಬಹಿರಂಗಪಡಿಸಿದೆ" ಎಂದು ವರದಿ ತಿಳಿಸಿದೆ.

"ಭಾರತ ಈ ಕಾಲಾವಕಾಶವನ್ನು ಮಿಲಿಟರಿ ಪಡೆಯನ್ನು ಸಜ್ಜುಗೊಳಿಸಲು ಬಳಸಿಕೊಳ್ಳುತ್ತಿರುವಂತೆಯೇ, ಅತ್ತಕಡೆ ಅಮೆರಿಕ ಪಾಕಿಸ್ತಾನದ ಮೇಲೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳವಂತೆ ಒತ್ತಡ ಹೇರುತ್ತಲೇ ಬಂದಿದೆ, ಇಲ್ಲವಾದಲ್ಲಿ ಭಾರತ ಕ್ರಮ ಕೈಗೊಳ್ಳವ ಸಮಯ ಬಂದಾಗ ತಾವು ನವದೆಹಲಿಯ ದಾರಿಗಡ್ಡವಾಗಿ ನಿಲ್ಲುವುದಿಲ್ಲ ಎಂದು ಅಮೆರಿಕ ಹೇಳಿದೆ" ಎಂದು ವರದಿ ಹೇಳುತ್ತದೆ.

ಇಂಟಲಿಜೆನ್ಸ್ ವಿಶ್ಲೇಷಕರು ಗಮನಿಸಿರುವ ಪ್ರಕಾರ, ನವದೆಹಲಿ ದೃಷ್ಟಿಕೋನದಲ್ಲಿ ಪಾಕಿಸ್ತಾನ ಕೆಲವು ದಾಳಿಗಳನ್ನು ಮತ್ತು ದಸ್ತಗಿರಿಗಳನ್ನು ಮಾಡಿದೆಯಾದರೂ, ಉಗ್ರವಾದಿಗಳಿಂದ ಭಾರತಕ್ಕಾಗುವ ಅಪಾಯವನ್ನು ತಪ್ಪಿಸಬಹುದಾದ ಯಾವುದೇ ಕ್ರಮ ಕೈಗೊಂಡಿಲ್ಲ.

ಅದೇನೇ ಇದ್ದರೂ, ಭಾರತ ಯಾವ ಮಟ್ಟದವರೆಗೆ ಮಿಲಿಟರಿ ಕಾರ್ಯಾಚರಣೆ ನಡೆಸಬಹುದು ಮತ್ತು ಇದು ಅಫ್ಘಾನಿಸ್ತಾನದಲ್ಲಿ ಅಮೆರಿಕ ಕಾರ್ಯಾಚರಣೆಯ ಮೇಲೆ ಎಷ್ಟರ ಮಟ್ಟಿನ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್ ಪತ್ರದ ಬಗ್ಗೆ ಪಾಕ್ ಸಂಶಯ
ಯುದ್ಧ ಬೇಡ, ನಡೆದರೆ ನಾವು ಸಿದ್ಧ: ಪಾಕ್
ನಮ್ಮ ದಾಖಲೆಗಳಲ್ಲಿ ಕಸಬ್ ಅಸ್ತಿತ್ವವೇ ಇಲ್ಲ: ಪಾಕ್
ಯುದ್ಧ ನಡೆದರೆ ತಾಲಿಬಾನ್‌ನಿಂದ ಪಾಕ್‌ಗೆ ಬೆಂಬಲ
ಸಕ್ರೀಯವಾಗಿರುವ ಜಮಾತ್ ವೆಬ್‌ಸೈಟ್
ನಿಜವಲ್ಲದ ಸುದ್ದಿ: 'ಪಾಕ್ ಮೇಲೆ ಭಾರತ ಆಕ್ರಮಣ ಮಾಡಿದೆ'