ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಾಹೋರ್ ಸ್ಫೋಟ: ಭಾರತೀಯ ಗುಪ್ತಚರನ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಹೋರ್ ಸ್ಫೋಟ: ಭಾರತೀಯ ಗುಪ್ತಚರನ ಬಂಧನ
ಲಾಹೋರ್ ಕಾರ್‌ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಪ್ರಕಟಿಸಿವೆ.

ಬಂಧಿತ ಆರೋಪಿ ಮುನೀರ್ ಅಲಿಯಾಸ್ ಸತೀಶ್ ಆನಂದ್ ಶುಕ್ಲಾ ಕೋಲ್ಕತಾ ನಿವಾಸಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಖಾಸಗಿ ಚಾನೆಲ್‌ಗಳಿಗೆ ಮಾಹಿತಿ ನೀಡಿವೆ.

ಆರೋಪಿ ಸತೀಶ್ ಕೆಲ ಕಾಲ ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾನೆ ಎಂದು ಪಾಕ್ ಪೊಲೀಸ್ ಮೂಲಗಳು ತಿಳಿಸಿವೆ.

ಲಾಹೋರ್‌ನ ಪೂರ್ವಭಾಗದಲ್ಲಿ ಸರಕಾರಿ ಅಧಿಕಾರಿಗಳು ವಾಸಿಸುವ ನಿವಾಸಿಗಳಿರುವ ಬಡಾವಣೆಯಲ್ಲಿ ಕಾರ್‌ಬಾಂಬ್‌ ಸ್ಫೋಟಿಸಿದಾಗ ಒಬ್ಬ ಮಹಿಳೆ ಸಾವನ್ನಪ್ಪಿದ್ದು ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಧೀಶರು ಹಾಗೂ ಉನ್ನತ ಸರಕಾರಿ ಅಧಿಕಾರಿಗಳು ವಾಸಿಸುವ ಕಟ್ಟಡದ ಬಳಿ ಇಂದು ಬೆಳಿಗ್ಗೆ 9.30ಕ್ಕೆ ಕಾರ್‌ಬಾಂಬ್‌ ಸ್ಫೋಟಗೊಂಡಿದೆ ಎಂದು ಪೊಲೀಸ್‌ ಅಧಿಕಾರಿಗಳು ಖಾಸಗಿ ಚಾನೆಲ್‌ಗಳಿಗೆ ಮಾಹಿತಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿಮ್ಮ ವೈಫಲ್ಯಕ್ಕೆ ನಮ್ಮನ್ಯಾಕೆ ದೂರುತ್ತೀರಿ: ಭಾರತಕ್ಕೆ ಪಾಕ್ ಪ್ರಶ್ನೆ
ಪಾಕ್ : ಹಣ ನೀಡಿದರೆ ಸುಸೈಡ್ ಬಾಂಬರ್‌ಗಳು ಲಭ್ಯ
ಉಲ್ಟಾ ಹೊಡೆದ ಶರೀಫ್: 'ಕಸಬ್ ಬಗ್ಗೆ ಸಾಕ್ಷಿ ನೀಡಿ'
ಡಿಸೆಂಬರ್ 26, ಪಾಕ್‌ಗೆ ಭಾರತ ನೀಡಿದ ಗಡುವು?
ಕಸಬ್ ಪತ್ರದ ಬಗ್ಗೆ ಪಾಕ್ ಸಂಶಯ
ಯುದ್ಧ ಬೇಡ, ನಡೆದರೆ ನಾವು ಸಿದ್ಧ: ಪಾಕ್