ಮುಂಬೈ ಉಗ್ರರ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕಿದ ಅಜಮಲ್ ಅಮೀರ್ ಕಸಬ್‌ಗೆ ಕಾನೂನು ನೆರವು ನೀಡಲು ಸಾಧ್ಯವಿಲ್ಲ ಎಂದು ಪಾಕ್ ಸರಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ.
ಪಾಕಿಸ್ತಾನದ ಆಂತರಿಕ ಸಚಿವಾಲಯದ ಮುಖ್ಯಸ್ಥ ರೆಹಮಾನ್ ಮಲೀಕ್ ಮಾತನಾಡಿ ಭಾರತ ಕಸಬ್ ಪಾಕಿಸ್ತಾನ ನಾಗರಿಕ ಎನ್ನುವುದಕ್ಕೆ ಸಂಪೂರ್ಣ ಸಾಕ್ಷಾಧಾರ ನೀಡುವವರೆಗೆ ಕಾನೂನು ನೆರವು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಸಬ್ ಪಾಕಿಸ್ತಾನಕ್ಕೆ ಬರೆದ ಪತ್ರದಲ್ಲಿ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾದವರೆಲ್ಲರೂ ಪಾಕಿಸ್ತಾನದ ನಾಗರಿಕರಾಗಿದ್ದು, ಪಾಕ್ ಸರಕಾರ ಸಹಕಾರ ನೀಡಿದೆ ಎಂದು ಪತ್ರ ಬರೆದ ಹಿನ್ನೆಲೆಯಲ್ಲಿ ಮಲಿಕ್ ಸ್ಪಷ್ಟನೆ ನೀಡಿದ್ದಾರೆ. |