ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನವೂ ಯುದ್ಧ ಬಯಸುತ್ತಿಲ್ಲ: ಗಿಲಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನವೂ ಯುದ್ಧ ಬಯಸುತ್ತಿಲ್ಲ: ಗಿಲಾನಿ
ಇಸ್ಲಾಮಾಬಾದ್: ಭಾರತದೊಂದಿಗೆ ಪಾಕಿಸ್ತಾನವು ಘರ್ಷಣೆ ಬಯಸುತ್ತಿಲ್ಲ ಎಂದು ಪ್ರಧಾನಿ ಯ‌ೂಸುಫ್ ರಾಜಾ ಗಿಲಾನಿ ಹೇಳಿಕೆ ನೀಡಿದ್ದು, ಎರಡು ದೇಶಗಳ ನಡುವಿನ ಯುದ್ಧ ಆತಂಕವನ್ನು ಕಡಿಮೆ ಮಾಡುವ ಯತ್ನವನ್ನು ಪಕ್ಕದ ರಾಷ್ಟ್ರವೂ ಶುರುವಿಟ್ಟುಕೊಂಡಿದೆ. ತನ್ನ ನೆಲದಿಂದ ಕಾರ್ಯಾಚರಿಸುವ ಉಗ್ರರ ಕೃತ್ಯಗಳನ್ನು ನಾವು ದಮನಿಸುವ ಶಕ್ತಿ ಹೊಂದಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಭಾರತವು ಪಾಕಿಸ್ತಾನಕ್ಕೆ ಇಂತಹುದೇ ಹೇಳಿಕೆಯನ್ನು ರವಾನಿಸಿತ್ತು. ಇದರ ಬೆನ್ನಿಗೆ ಪಾಕ್ ಕೂಡ ತನ್ನ ಸಹಮತಿ ಸೂಚಿಸಿದ್ದು, ತಾನೂ ಯುದ್ಧ ಬಯಸುತ್ತಿಲ್ಲ ಎಂಬ ಹೇಳಿಕೆ ನೀಡಿದೆ. "ನಾವು ಭಾರತದ ಜತೆ ಅತ್ಯುತ್ತಮ ಸಂಬಂಧವನ್ನು ಬಯಸುತ್ತಿದ್ದೇವೆ. ಈಗ ಉಭಯ ರಾಷ್ಟ್ರಗಳ ನಡುವೆ ನೆಲೆಸಿರುವ ಉದ್ವಿಗ್ನ ವಾತಾವರಣವನ್ನು ಶಮನಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ಯತ್ನಿಸಬೇಕು" ಎಂದು ಗಿಲಾನಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

"ಭಯೋತ್ಪಾದನೆಯಿಂದ ತೊಂದರೆಗೊಳಗಾದ ಭಾರತದ ನೋವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಪಾಕಿಸ್ತಾನವು ಒಂದು ಜವಾಬ್ದಾರಿಯುತ ರಾಷ್ಟ್ರ ಮತ್ತು ಸ್ವತಃ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ. ಭಾರತವೂ ಸೇರಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಉಗ್ರರ ದಾಳಿಯನ್ನು ನಾವು ಬಯಸುವುದಿಲ್ಲ" ಎಂದು ಗಿಲಾನಿ ಹೇಳಿದ್ದಾರೆ.

ನಾವು ಭಾರತದೊಂದಿಗೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳಲು ಸಿದ್ಧರೆಂದ ಗಿಲಾನಿ, "ನಾವು ಯಾವುದೇ ರೀತಿಯಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸಲ್ಪಡುವುದನ್ನು ಇಚ್ಛಿಸುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪಾಕಿಸ್ತಾನ ಶಕ್ತವಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. "ಪಾಕಿಸ್ತಾನವು ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ಯುದ್ಧ ಬಯಸುತ್ತಿಲ್ಲ ಎಂಬುದನ್ನು ಜಗತ್ತಿಗೆ ಹೇಳುತ್ತಿದ್ದೇವೆ. ಆದರೆ ಒಂದು ವೇಳೆ ಯುದ್ಧ ನಮ್ಮ ಮೇಲೆ ನಡೆದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ದೇಶದ ಪ್ರಜೆಗಳು, ನಾಯಕತ್ವ ಮತ್ತು ಸೇನೆಗೆ ಗೊತ್ತು" ಎಂದು ಗಿಲಾನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದೊಂದಿಗಿನ ಯುದ್ಧ ಪಾಕ್‌ಗೆ ಅಶುಭವಾಗಲಿದೆ
ಕಸಬ್ ನಾಗರಿಕತ್ವ ಸಾಬೀತಾಗುವವರೆಗೆ ನೆರವಿಲ್ಲ:ಪಾಕ್
ಲಾಹೋರ್ ಸ್ಫೋಟ: ಭಾರತೀಯ ಗುಪ್ತಚರನ ಬಂಧನ
ನಿಮ್ಮ ವೈಫಲ್ಯಕ್ಕೆ ನಮ್ಮನ್ಯಾಕೆ ದೂರುತ್ತೀರಿ: ಭಾರತಕ್ಕೆ ಪಾಕ್ ಪ್ರಶ್ನೆ
ಪಾಕ್ : ಹಣ ನೀಡಿದರೆ ಸುಸೈಡ್ ಬಾಂಬರ್‌ಗಳು ಲಭ್ಯ
ಉಲ್ಟಾ ಹೊಡೆದ ಶರೀಫ್: 'ಕಸಬ್ ಬಗ್ಗೆ ಸಾಕ್ಷಿ ನೀಡಿ'