180 ಸೆಕೆಂಡುಗಳ ಅಂತರದಲ್ಲಿ ಆರು ಮಂದಿ ಮಕ್ಕಳಿಗೆ ಜನ್ಮನೀಡಿದ ತಾಯಿಯೊಬ್ಬಳು ಮಹಾ ತಾಯಿ ಎನಿಸಿಕೊಂಡಿದ್ದಾಳೆ. ಈ ಮಕ್ಕಳು ನಿಗದಿತ ಅವಧಿಗಿಂತ ಮೂರು ತಿಂಗಳು ಮೊದಲೇ ಹುಟ್ಟಿವೆಯಾದರೂ ಷಷ್ಟಶಿಶುಗಳು ಆರೋಗ್ಯವಾಗಿವೆ.
ಇದು ನಡೆದದ್ದು ಬರ್ಲಿನ್‌ನ ಚಾರಿಟಿ ಆಸ್ಪತ್ರೆಯೊಂದರಲ್ಲಿಯ ಮೂರು ನಿಮಿಷಗಳ ಅಂತರದಲ್ಲಿ ರೋಕ್ಸಾನಾ ತೆಮಿಜ್ ಎಂಬ ತಾಯಿ 800ರಿಂದ 900 ಗ್ರಾಂ ತೂಕವಿರುವ ಆರು ಮಕ್ಕಳನ್ನು ಹೆತ್ತಿದ್ದಾರೆ. ರಾನಾ ಎಂಬ ಹೆಣ್ಣು ಮಗು ಮೊದಲು ಲೋಕದ ಬೆಳಕು ಕಂಡರೆ, ಅಹ್ಮದ್ ಎಂಬ ಗಂಡುಮಗು ಆರನೇಯವನಾಗಿ ಧರೆಗಿಳಿದಿದೆ.
ತಾಯಿ ಮತ್ತು ಈ ಶಿಶುಗಳು ಆರೋಗ್ಯಪೂರ್ಣವಾಗಿವೆ ಎಂಬುದನ್ನು ಚಾರಿಟಿ ಆಸ್ಪತ್ರೆಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. |