ಇತ್ತೀಚೆಗಷ್ಟೇ ಬಾಂಗ್ಲಾದ ಸಾರ್ವತ್ರಿಕ ಚುನಾವಣೆ ನಡೆದ ಬೆನ್ನಲ್ಲೇ, ಇಲ್ಲಿನ ದಕ್ಷಿಣ ಸಂಸತ್ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಶನಲಿಷ್ಟ್ ಪಕ್ಷ (ಬಿಎನ್‌ಪಿ) ಜಯಸಾಧಿಸಿದೆ.ಬಾಂಗ್ಲಾದ ನೌಕಾಲಿ ಸಂಸತ್ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಾಂಗ್ಲಾದೇಶ್ ನ್ಯಾಶನಲಿಷ್ಟ್ ಪಕ್ಷದ ಮಹಬುದ್ದೀನ್ ಕೋಕಾನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರಧಾನಿ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಅಭ್ಯರ್ಥಿ ಎಚ್.ಎಂ.ಇಬ್ರಾಹಿಂ ವಿರುದ್ಧ ಗೆಲುವು ಸಾಧಿಸಿದ್ದಾರೆ.ಬಾಂಗ್ಲಾದೇಶ ನ್ಯಾಶನಲಿಷ್ಟ್ ಪಕ್ಷದ ಮಹಬುದ್ದೀನ್ ಕೋಕಾನ್ ಅವರು 1,05,380ಮತಗಳನ್ನು ತಮ್ಮ ಬಗಲಿಗೆ ಹಾಕಿಕೊಂಡಿದ್ದರೆ, ಅವಾಮಿ ಲೀಗ್‌ನ ಇಬ್ರಾಹಿಂ ಅವರು 80,658ಮತ ಗಳಿಸಿರುವುದಾಗಿ ಚುನಾವಣಾ ಆಯೋಗದ ವಕ್ತಾರ ಮಂಗಳವಾರ ತಿಳಿಸಿದ್ದಾರೆ. ಆದರೆ ಇದು ಅಧಿಕೃತ ಫಲಿತಾಂಶ ಅಲ್ಲ ಎಂದು ತಿಳಿಸಿದೆ.ಸಾರ್ವತ್ರಿಕ ಚುನಾವಣೆಯಲ್ಲಿ ಹಸೀನಾ ನೇತೃತ್ವದ ಮೈತ್ರಿಪಕ್ಷ 262 ಸೀಟುಗಳನ್ನು ಕಬಳಿಸಿ, ಜಯಭೇರಿ ಬಾರಿಸಿತ್ತು. ಆದರೆ ಭಾರೀ ನಿರೀಕ್ಷೆ ಇಟ್ಟಕೊಂಡಿದ್ದ ಖಾಲೀದಾ ಜಿಯಾ ಅವರ ಪಕ್ಷ ಕೇವಲ 32ಸೀಟುಗಳನ್ನು ಪಡೆದು ತೀವ್ರ ಮುಖಭಂಗ ಅನುಭವಿಸಿತ್ತು. |