ಕೆನೆಡಾ ಕೃಷಿ ಸಚಿವ ಗೆರ್ರಿ ರಿರ್ಟ್ಸ್ ಮತ್ತು ಭಾರತದ ಕೃಷಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶರದ್ ಪವಾರ್ ಮಂಗಳವಾರ ಭೇಟಿಯಾಗಲಿದ್ದು, ಎರಡು ದೇಶಗಳ ನಡುವಿನ ಕೃಷಿ ಸಂಬಂಧಿತ ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದದಿಂದ ಎರಡು ದೇಶಗಳ ಕೃಷಿ ಚಟುವಟಿಕೆಯಲ್ಲಿ ತಾಂತ್ರಿಕತೆ ಮತ್ತು ಮಾರುಕಟ್ಟೆ ಲಭ್ಯವಾಗಲಿದೆ. ಭವಿಷ್ಯದಲ್ಲಿ ಇದು ಉಭಯ ರಾಷ್ಟ್ರಗಳೊಳಗಿನ ಕೃಷಿಯನ್ನು ಆಶ್ರಯಿಸುವ ರೈತ ವರ್ಗದವರಿಗೆ ಸಹಕಾರಿಯಾಗಲಿದೆ ಎಂದು ತಿಳಿದು ಬಂದಿದೆ. |