ಆರ್ಯರ ವಲಸೆ ಸಿದ್ದಾಂತ (ಎಎಂಟಿ) ಕಿರುಕಥನ ಹೊಂದಿರುವ ಇತಿಹಾಸಕಾರ ಮೈಕೇಲ್ ವುಡ್ಸ್ ಅವರ 'ದಿ ಸ್ಟೋರಿ ಆಫ್ ಇಂಡಿಯಾ' ಸಾಕ್ಷ್ಯ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದು ಅಮೆರಿಕ ಮೂಲದ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪ್ರತಿ ಬಾರಿಯೂ ಹಿಂದೂ ನಾಗರಿಕತೆಯನ್ನು ಅವಹೇಳನಕ್ಕೀಡು ಮಾಡಲಾಗುತ್ತಿದೆ. ಅಲ್ಲದೇ ಅದರಲ್ಲಿ ಚರ್ಚಾಸ್ಪದ ವಿಷಯವೇ ಇಲ್ಲ, ಆ ನಿಟ್ಟಿನಲ್ಲಿ ಆರ್ಯರ ವಲಸೆ ಥಿಯರಿಯನ್ನು ಹಿಂದೂ ಅಮೆರಿಕನ್ ಫೌಂಡೇಶನ್(ಎಚ್ಎಎಫ್)ತಿರಸ್ಕರಿಸಿರುವುದಾಗಿ ಹೇಳಿದೆ.
ಮೈಕೇಲ್ ವುಡ್ ಅವರು ಭಾರತ ಮತ್ತು ಜನರನ್ನು ತಮ್ಮ ಸಾಕ್ಷ್ಯ ಚಿತ್ರದಲ್ಲಿ ಕೀಳಾಗಿ ಚಿತ್ರಿಸಿದ್ದಾರೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ನಿರ್ದೇಶಕ ಶೀತಲ್ ಷಾ ತಿಳಿಸಿದ್ದಾರೆ.
ನಾವು ಸ್ಟೋರಿ ಆಫ್ ಇಂಡಿಯಾ ಸಾಕ್ಷ್ಯ ಚಿತ್ರವನ್ನು ಪರಿಶೀಲಿಸಿಲ್ಲ, ಆದರೆ ತಪ್ಪಾಗುವ ಮುನ್ನವೇ ಸಾಕ್ಷ್ಯ ಚಿತ್ರವನ್ನು ಪರಿಶೀಲಿಸಿ, ಸರಿಪಡಿಸಿ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಿಪೂ.1500 ಸುಮಾರಿಗೆ ಪ್ಯಾಸ್ತರಲ್ ಬುಡಕಟ್ಟು ಜನಾಂಗದವರನ್ನೇ ಆರ್ಯನ್ಸ್ ಎಂದು ಗುರುತಿಸಿದ್ದು, ಅವರು ಮಧ್ಯ ಯುರೋಪ್‌ನಿಂದ ವಾಯುವ್ಯ ಭಾರತದ ಕಡೆ ವಲಸೆ ಬಂದ ಅವರು, ತಮ್ಮದೇ ಸಂಸ್ಕೃತಿ ಬೆಳೆಸಿಕೊಂಡಿದ್ದರು ಎಂಬುದು ಎಎಂಟಿ ಸಿದ್ದಾಂತ.
ಆದರೆ ಈ ಸಿದ್ದಾಂತಕ್ಕೆ ಪುರಾತತ್ವದ ಸಾಕ್ಷ್ಯವಿಲ್ಲ, ಈ ಸಿದ್ದಾಂತವನ್ನು ಯುರೋಪ್ ಮತ್ತು ಬ್ರಿಟನ್‌ನವರು ಪ್ರಚುರ ಪಡಿಸಿದ್ದರು. ಬಳಿಕ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಯಿತು. |