ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಮಾಜಿ ಮುಖ್ಯಸ್ಥ ಅಬ್ದುಲ್ ಖಾದೀರ್ ಖಾನ್ ಅವರ ಜತೆ ಸಂಪರ್ಕ ಹೊಂದಿದ ಜನರಿಗೆ ಮತ್ತು ಕಂಪೆನಿಗಳ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದೆ. ಖಾನ್ ಅವರ ಅಣ್ವಸ್ತ್ರ ತಂತ್ರಜ್ಞಾನದ ಅಕ್ರಮ ವ್ಯಾಪಾರದಲ್ಲಿ ಭಾಗಿಯೆಂದು ಆರೋಪಿಸಲಾದ 13 ಜನರು ಮತ್ತು 3 ಕಂಪೆನಿಗಳ ವಿರುದ್ಧ ಈ ದಿಗ್ಬಂಧನ ವಿಧಿಸಿದೆ.
ಈ ದಿಗ್ಬಂಧನಗಳಿಂದ ಮುಂದಿನ ಅಣ್ವಸ್ತ್ರ ಪ್ರಸರಣ ಸಂಬಂಧಿತ ಚಟುವಟಿಕೆಗಳನ್ನು ತಪ್ಪಿಸಲು ನೆರವಾಗುತ್ತದೆಂದು ಅಮೆರಿಕದ ಅಧಿಕಾರಿಗಳು ಆಶಿಸಿದ್ದಾರೆ.
2004ರಲ್ಲಿ ಇತರೆ ರಾಷ್ಟ್ರಗಳಿಗೆ ಅಣ್ವಸ್ತ್ರ ತಂತ್ರಜ್ಞಾನ ಗೌಪ್ಯಮಾಹಿತಿಗಳನ್ನು ಹಸ್ತಾಂತರಿಸಿದ್ದಾಗಿ ಖಾನ್ ಒಪ್ಪಿಕೊಂಡಿದ್ದರು. ಅವರನ್ನು ಬಳಿಕ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಕ್ಷಮಿಸಿ, ಇಸ್ಲಮಾಬಾದಿನಲ್ಲಿ ಅಕ್ಷರಶಃ ಗೃಹಬಂಧನದಲ್ಲಿ ಇರಿಸಲಾಗಿತ್ತು.
2000ರಲ್ಲಿ ಪಾಕಿಸ್ತಾನ ಯುರೇನಿಯಂ ಸಂಸ್ಕರಣ ಸಾಮಗ್ರಿಯನ್ನು ರಾಷ್ಟ್ರದ ಸೇನೆಯ ಪೂರ್ಣ ಅರಿವಿನೊಂದಿಗೆ ಉತ್ತರ ಕೊರಿಯಕ್ಕೆ ಹಸ್ತಾಂತರಿಸಿದ್ದಾಗಿ ಖಾನ್ ಹೇಳಿದ್ದರು. ಆದರೆ ಖಾನ್ ಹೊರತುಪಡಿಸಿ ಅಣ್ವಸ್ತ್ರ ತಂತ್ರಜ್ಞಾನ ವರ್ಗಾವಣೆ ಬಗ್ಗೆ ಬೇರೆಯಾರಿಗೂ ತಿಳಿದಿರಲಿಲ್ಲ ಎಂದು ಮುಷರಫ್ ಖಾನ್ ಹೇಳಿಕೆಯನ್ನು ಅಲ್ಲಗಳೆದಿದ್ದರು.
ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಮಾಜಿ ಮುಖ್ಯಸ್ಥ ಅಬ್ದುಲ್ ಖಾದೀರ್ ಖಾನ್ ಅವರ ಜತೆ ಸಂಪರ್ಕ ಹೊಂದಿದ ಜನರ ಕುರಿತು
ಮುಗಿದ ಅಧ್ಯಾಯ:ಅಮೆರಿಕ ನಿಷೇಧ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ,ಎ.ಕ್ಯೂ.ಖಾನ್ ಅವರದ್ದು ಮುಗಿದ ಅಧ್ಯಾಯ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |