ಕಳೆದ ವರ್ಷ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ಕುರಿತಂತೆ ಭಾರತ, ಪಾಕಿಸ್ತಾನಕ್ಕೆ ನೀಡಿರುವ ಪುರಾವೆಯನ್ನು ಮಂಗಳವಾರ ತಿರಸ್ಕರಿಸಿರುವ ಮತ್ತೊಂದು ಎಡಬಿಡಂಗಿತನದ ಹೇಳಿಕೆ ನೀಡಿದೆ.ಕಳೆದ ನವೆಂಬರ್ ತಿಂಗಳಿನಲ್ಲಿ ಮುಂಬೈಯಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡ ಇರುವ ಬಗ್ಗೆ ಜನವರಿ 4ರಂದು ಭಾರತ. ಪಾಕ್ ರಾಯಭಾರಿಗೆ ಸುಮಾರು 60ಪುಟಗಳ ಸಾಕ್ಷ್ಯವನ್ನು ಹಸ್ತಾಂತರಿಸಲಾಗಿತ್ತು.ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನ ತನಿಖೆ ವಿವರ, ಸೆಟಲೈಟ್ ದೂರವಾಣಿಯಲ್ಲಿ ಮಾತನಾಡಿದ ವಿವರಗಳು ವರದಿಯಲ್ಲಿತ್ತು.ಇದೀಗ ದಿನಕ್ಕೊಂದು ವಿವಾದಿತ ಹೇಳಿಕೆ ನೀಡುತ್ತಿದ್ದ ಪಾಕ್ ಮತ್ತೆ, ಭಾರತದಿಂದ ಎಲ್ಲಾ ಮಾಹಿತಿಯನ್ನು ಪಡೆಯಲಾಗಿದೆ ವಿನಃ ಯಾವುದೇ ಪುರಾವೆ ಅಲ್ಲ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಿಳಿಸಿದ್ದು, ಆ 'ಮಾಹಿತಿ'ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.ದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ತನಿಖೆ ನಡೆಸುವ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿರುವುದಾಗಿ ಈ ಸಂದರ್ಭದಲ್ಲಿ ದೂರಿದರು. |