26 /11ರ ಮುಂಬೈಯಲ್ಲಿ ನಡೆಸಲಾಗಿರುವ ದಾಳಿಗಳು ಅಮೆರಿಕದ ರಾಯಭಾರಕ್ಕೆ ಹೊಸ ಸವಾಲೊಡ್ಡಿದೆ ಎಂದಿರುವ ಅಮೆರಿಕದ ಭಾವಿ ಸಂಭಾವ್ಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬಣ್ಣಿಸಿದ್ದು, ವಿಶ್ವದ ಪ್ರಭಾವಶಾಲಿ ರಾಷ್ಟ್ರವಾದ ಭಾರತದ ಜತೆ ಆರ್ಥಿಕ ಮತ್ತು ರಾಜಕೀಯ ಸಹಭಾಗಿತ್ವ ಹೊಂದುವುದಾಗಿ ನುಡಿದರು. ಪ್ರಸಕ್ತ ಭದ್ರತಾ ಬೆದರಿಕೆಗಳ ಬಗ್ಗೆ ಏಕಾಂಗಿಯಾಗಿ ಮಾತನಾಡುವುದು ಸಾಧ್ಯವಾಗುವುದಿಲ್ಲ ಎಂದು ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಅವರು ತಿಳಿಸಿದರು.ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ದೃಢಪಡಿಸುವ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಕ್ಲಿಂಟನ್ ತಮ್ಮ ಸಾಕ್ಷ್ಯವನ್ನು ಮಂಗಳವಾರ ಮುಗಿಸಿದರು. ಸಮಿತಿಯು ಕ್ಲಿಂಟನ್ ಅವರನ್ನು ಗುರುವಾರ ಚುನಾಯಿಸುವುದೆಂದು ನಿರೀಕ್ಷಿಸಲಾಗಿದ್ದು, ಒಬಾಮಾ ಮುಂದಿನ ಮಂಗಳವಾರ ಅಧಿಕಾರ ಸ್ವೀಕರಿಸುವ ಮುಂಚೆ ಪೂರ್ಣ ಸೆನೆಟ್ ಹಿಲರಿ ನಾಮಕರಣವನ್ನು ಅನುಮೋದಿಸುವ ಸಂಭವವಿದೆ.ವಿಶ್ವದ ಅತ್ಯಂತ ಜನಸಂಖ್ಯಾಭರಿತ ಪ್ರಜಾಪ್ರಭುತ್ವದೊಂದಿಗೆ ಮತ್ತು ವಿಶ್ವದಲ್ಲೇ ಹೆಚ್ಚಿನ ಪ್ರಭಾವಶಾಲಿ ರಾಷ್ಟ್ರದೊಂದಿಗೆ ನಾವು ಆರ್ಥಿಕ ಮತ್ತು ರಾಜಕೀಯ ಸಹಭಾಗಿತ್ವವನ್ನು ಹೊಂದುತ್ತೇವೆ ಎಂದು ಕ್ಲಿಂಟನ್ ಹೇಳಿದರು. ವಿಶ್ವವು ಆರ್ಥಿಕ ಹಿಂಜರಿತದಿಂದ ಕವಲುದಾರಿಯಲ್ಲಿದ್ದು, ಬಿಕ್ಕಟ್ಟಿನ ಪರಿಹಾರಕ್ಕಾಗಿ, ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮುತ್ತಿರುವ ಭಾರತ ಮತ್ತು ಚೀನಾ ಕಾರ್ಯೋನ್ಮುಖವಾಗುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. |