ಬ್ರೈನ್ ಹೆಮರೇಜ್‌ನಿಂದ ಸಾವನ್ನಪ್ಪಿರುವ ಐಸ್‌ಸ್ಕೇಟರ್ ಮಹಿಳೆಯೊಬ್ಬರ ಉದರದಲ್ಲಿದ್ದ ಮಗುವನ್ನು ಯಾವುದೇ ಅಪಾಯವಿಲ್ಲದಂತೆ ಹೆರಿಗೆ ಮಾಡಿಸಿರುವ ಅಪರೂಪದ ಘಟನೆ ವರದಿಯಾಗಿದೆ.
ಜಾಯ್ನೆ ಸೋಲಿಮನ್ ಎಂಬ 41ರ ಹರೆಯದ ಗರ್ಭಿಣಿ ಮಹಿಳೆ ಮೆದುಳು ಸ್ರಾವದಿಂದಾಗಿ ಹಠಾತ್ ಕುಸಿದು ಸಾವನ್ನಪ್ಪಿದರು. ಆದರೆ ರಾಯಲ್ ಬರ್ಕ್‌ಶೈರ್ ಆಸ್ಪತ್ರೆಯ ವೈದ್ಯರು ಸಿಸೇರಿಯನ್ ಆಪರೇಶನ್ ಮೂಲಕ ಮಗುವನ್ನು ಹೊರತೆಗೆಯಲು ಅಗತ್ಯವಿರುವಷ್ಟು ಅವರ ಹೃದಯ ಮಿಡಿತನ್ನು ನಿಭಾಯಿಸಿದ್ದರು.
ಜಾಯ್ನೆ ಅವರಿಗೆ ದೊಡ್ಡ ಡೋಸ್ ಸ್ಟೀರಾಯ್ಡ್‌ಗಳನ್ನು ಮಗುವಿನ ಶ್ವಾಸಕೋಶದ ಸರಾಗ ಕಾರ್ಯಕ್ಕಾಗಿ ನೀಡಲಾಗಿತ್ತು. ಇದಾದ ಬಳಿಕ 48 ಗಂಟೆಗಳಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದರು. ಅವಧಿ ತುಂಬುವುದಕ್ಕೆ 15 ವಾರಗಳಿಗೆ ಮುಂಚಿತವಾಗಿ ಜನಿಸಿದ ಈ ಮಗು ಆಯಾ, ಆಕೆಯ ಪ್ರಥಮ ಮಗು ಎಂಬುದಾಗಿ ಡೇಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ. ದುರದೃಷ್ಟವಶಾತ್ ಮಗು ಕಣ್ಣುಬಿಡುವ ಮುನ್ನವೇ ತಾಯಿ ಕಣ್ಣು ಮುಚ್ಚಿದ್ದಾರೆ.
ತನ್ನ ಮಗುವನ್ನು ಜೀವಂತ ಪಡೆದಿರುವ 29ರ ಹರೆಯದ ಈಜಿಪ್ಟ್ ಜನಿತ ಮಹಮೂದ್ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತನ್ನ ಪತ್ನಿಯ ಸಾವು ತನಗೆ ತೀವ್ರವಾದ ನೋವನ್ನು ನೀಡಿದೆ ಎಂದು ಹೇಳಿದ್ದಾರೆ.
ಆಕೆಗೆ ಒಬ್ಬ ಪ್ರೀತಿಯ ಪತಿ ಮತ್ತು ಒಂದು ಮಗುವೊಂದನ್ನು ಆಕೆ ಯಾವತ್ತೂ ಬಯಸುತ್ತಿದ್ದಳು. ಆಕೆ ತನ್ನ ಶಕ್ತಿಯನ್ನೆಲ್ಲ ತನ್ನ ಮಗುವನ್ನು ಬದುಕಿಸಲು ಹೋರಾಡಿದಳು. ಆದರೆ ಆಕೆ ಆಯಾ ಜಾಯ್ನೆಯನ್ನು ನೋಡುವಂತಿಲ್ಲ ಎಂಬುದು ನನ್ನ ಕರುಳು ಕಿವುಚಿದಂತಾಗಿಸುತ್ತದೆ ಎಂದು ಮಗುವಿನ ತಂದೆ ಹೇಳಿದ್ದಾರೆ.
ಈ ದಂಪತಿಗಳು ಅಲ್ಪಕಾಲದ ಒಡನಾಟದ ಬಳಿಕ 2007ರಲ್ಲಿ ಅಬುಧಬಿಯಲ್ಲಿ ವಿವಾಹವಾಗಿದ್ದರು. ಸೌತಂಪ್ಟನ್‌ನಲ್ಲಿ ಜನಿಸಿರುವ ಜಾಯ್ನೆ ಅವರು ದುಬೈಯಲ್ಲಿ ಐಸ್ ಸ್ಕೇಟಿಂಗ್ ಕೋಚ್ ಆಗಿದ್ದರು. ಆಕೆ ಇಸ್ಲಾಂಗೆ ಮತಾಂತರ ಹೊಂದಿದ್ದು ಬಳಿಕ ಬ್ರಿಟನ್‌ಗೆ ತೆರಳಿದ್ದರು.
ಜಾಯ್ನೆ ಅವರು ತಲೆನೋವೆಂದು ಕುಸಿದ ಬಿದ್ದವೇಳೆ 25 ವಾರಗಳ ಗರ್ಭಿಣಿಯಾಗಿದ್ದರು. |