ಮುಂಬೈದಾಳಿಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಹೇಳಾಗಿರುವ 124 ಮಂದಿಯನ್ನು ಬಂಧಿಸಿರುವುದಾಗಿ ಪಾಕಿಸ್ತಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ, ಇವರ ಕಾನೂನು ವಿಚಾರಣೆಗೆ ಇನ್ನಷ್ಟು ಪುರಾವೆಗಳ ಅಗತ್ಯವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹಮ್ಮಾನ್ ಹೇಳಿದ್ದಾರೆ.
ಕಳೆದ ನವೆಂಬರ್ನಲ್ಲಿ ನಡೆಸಲಾಗಿರುವ 183 ಮಂದಿಯನ್ನು ಬಲಿತೆಗೆದುಕೊಂಡಿರುವ ಮಂಬೈ ದಾಳಿಯ ಸಂಚನ್ನು ಪಾಕಿಸ್ತಾನದಲ್ಲಿ ಹೂಡಲಾಗಿದೆ ಎಂದು ಭಾರತ ಹೇಳಿದೆ. ಆದರೆ ಇದಕ್ಕೆ ಇನ್ನಷ್ಟು ಪುರಾವೆಗಳ ಅಗತ್ಯವಿದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ. |