ಮುಂಬೈ ದಾಳಿಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಎ ತೊಯ್ಬಾ ಅಥವಾ ಇನ್ಯಾವುದೇ ಸಂಘಟನೆಗಳು ಭಾಗಿಯಾಗಿವೆ ಎಂಬ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಪಾಕ್ ತಿಳಿಸಿದೆ.
ಆ ನಿಟ್ಟಿನಲ್ಲಿ 26/11ರ ತನಿಖೆಗಾಗಿ ಮೂರು ಮಂದಿಯ ಆಯೋಗವನ್ನು ರಚಿಸಲಿದೆ. ಅದು ಭಾರತದ ಗುಪ್ತಚರ ಇಲಾಖೆಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಿದೆ ಎಂದು ಮಾಧ್ಯಮದ ವರದಿ ಹೇಳಿದೆ.
ಎಫ್‌ಐಎನ ಸಹಾಯಕ ನಿರ್ದೇಶಕ ಜಾವೇದ್ ಇಕ್ಬಾಲ್ ಅವರ ನೇತೃತ್ವದಲ್ಲಿ ಆಯೋಗ ರಚನೆಯಾಗಲಿದ್ದು, ಅವರೊಂದಿಗೆ ಖಾಲಿದ್ ಖುರೇಷಿ ಹಾಗೂ ಲಿಯಾಖತ್ ಅಲಿ ಖಾನ್ ಇರುವುದಾಗಿ ಜಿಯೋ ಟಿವಿ ವರದಿ ವಿವರಿಸಿದೆ.
ದಾಳಿ ಕುರಿತಂತೆ ಭಾರತ ಗುಪ್ತಚರ ಇಲಾಖೆ ನಡೆಸಿರುವ ತನಿಖೆಯ ವಿವರಗಳನ್ನು ಆಯೋಗ ನೇರವಾಗಿ ಹಂಚಿಕೊಳ್ಳಲಿದೆ. ಹಾಗೂ ಆಯೋಗ ಶೀಘ್ರವೇ ತನ್ನ ತನಿಖೆಯನ್ನೂ ಪೂರ್ಣಗೊಳಿಸಲಿದೆ ಎಂದು ವರದಿ ತಿಳಿಸಿದೆ. |