ಅಮೆರಿಕದ 320ಪ್ರಯಾಣಿಕ ವಿಮಾನವೊಂದು ಶುಕ್ರವಾರ ಬೆಳಿಗ್ಗೆ ಹಡ್ಸನ್ ನದಿಗೆ ಬಿದ್ದಿದ್ದರೂ ಕೂಡ, ಪ್ರಯಾಣಿಕರೆಲ್ಲರೂ ಪವಾಡ ಸದೃಶವಾಗಿ ಪಾರಾಗಿದ್ದಾರೆ.
148 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಗಳನ್ನೊಳಗೊಂಡ ವಿಮಾನ ಎಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಹಡ್ಸನ್ ನದಿಗೆ ಬಿದ್ದಿತ್ತು, ಆದರೆ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಯಾವುದೇ ಪ್ರಾಣಾಪಯವಿಲ್ಲದೆ ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೆಡೆ ಭಯದಿಂದ ಪ್ರಯಾಣಿಕರು ಹೆದರಿ ಕಂಗಲಾಗಿದ್ದರೆ ಮತ್ತೊಂದೆಡೆ ಮೈನಸ್ 6ಡಿಗ್ರಿ ಶೀತದಿಂದ ಕೂಡಿದ್ದ ನದಿ ನೀರಿನಿಂದಾಗಿ ಪ್ರಯಾಣಿಕರು ನಡುಗುತ್ತಿದ್ದರು. ರಕ್ಷಣೆಗಾಗಿ ವಿಮಾನದ ರೆಕ್ಕೆಗಳನ್ನು ಹಿಡಿದು ಜೋತಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದು, ಅವರೆಲ್ಲರಿಗೂ ಲೈಫ್ ಜಾಕೆಟ್ ನೀಡಿ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. |