ಹೈದರಾಬಾದ್ ಮೂಲದ ಅಕ್ಷಯ್ ವಿಶಾಲ್ ಎಂಬ ಸಾಫ್ಟ್ವೇರ್ ಎಂಜಿನಿಯರ್ನ್ನು ಅಮೆರಿಕದ ಆರ್ಕಾನ್ಸಸ್ ಎಂಬಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
26ವರ್ಷದ ವಿಶಾಲ್ ಎಂಬ ಎಂಜಿನಿಯರ್ ವಂಚನೆಗೊಳಗಾಗಿರುವ ಸತ್ಯಂ ಕಂಪ್ಯೂಟರ್ಸ್ ಸರ್ವಿಸ್ ಲಿಮಿಟೆಡ್ ಉದ್ಯೋಗಿಯಾಗಿದ್ದರು ಮತ್ತು ಅಮೆರಿಕ ಕಂಪೆನಿಯಾದ ಜೆಟ್ ಫಾಲ್ಕಾನ್ನೊಂದಿಗೆ ಗುತ್ತಿಗೆ ಕೆಲಸಗಾರರಾಗಿದ್ದರು.
ಅಮೆರಿಕದ ಆರ್ಕಾನ್ಸನ ಲಿಟಲ್ ರಾಕ್ ಎಂಬಲ್ಲಿ ತಮ್ಮ ಪುತ್ರ ಕಾರಿನೊಳಕ್ಕೆ ಹತ್ತುತ್ತಿದ್ದಾಗ ಕೆಲ ಅಪರಿಚಿತ ವ್ಯಕ್ತಿಗಳು ವಿಶಾಲ್ ಕಾಲಿಗೆ ಗುಂಡಿನ ಮಳೆಗರೆದಿದ್ದರು ಎಂದು ಎಂಜಿನಿಯರ್ ಕುಟುಂಬದ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯ ನಂತರ ಆತನಿಗೆ ತೀವ್ರ ರಕ್ತ ಸ್ರಾವ ಉಂಟಾಗಿದ್ದು ಮತ್ತು ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾನೆ ಆದರೆ, ಅಲ್ಲಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ವಿಶಾಲ್ ತಂದೆ ಮೂರ್ತಿ ಹೇಳಿದ್ದಾರೆ. |