ಅಮೆರಿಕದ ಅಧ್ಯಕ್ಷಗಾದಿ ಏರುತ್ತಿರುವ, ಪ್ರಪ್ರಥಮ ಬಾರಿಗೆ ಶ್ವೇತಭವನ ಪ್ರವೇಶಿಸುವ ಕಪ್ಪು ಜನಾಂಗೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಮೂಲಕ ಇತಿಹಾಸ ಸೃಷ್ಟಿಸಿರುವ ಬರಾಕ್ ಹುಸೇನ್ ಒಬಾಮ, ಇದೀಗ ದೇಶ ಆರ್ಥಿಕ ದಿವಾಳಿತನದಿಂದ ದಿಕ್ಕೆಟ್ಟು ಹೋಗಿದ್ದರು ಕೂಡ ಜನವರಿ20ರಂದು ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮವನ್ನು ರಾಜವೈಭವದೊಂದಿಗೆ ನಡೆಸುವ ಲೆಕ್ಕಚಾರದೊಂದಿಗೆ ಹೊಸದೊಂದು ಮೈಲಿಗಲ್ಲನ್ನೇ ಸ್ಥಾಪಿಸಲು ಹೊರಟಿದ್ದಾರೆ.ನಿಯೋಜಿತ ಅಧ್ಯಕ್ಷರಾಗಿರುವ ಬರಾಕ್ ಒಬಾಮ ಅವರು ಶ್ವೇತಭವನ ಪ್ರವೇಶಕ್ಕಾಗಿ ಅಂದಾಜು 150ಮಿಲಿಯನ್ ಡಾಲರ್ ಹಣವನ್ನು ವ್ಯಯಿಸಲಾಗುತ್ತಿದ್ದು, ಇದು ಅಮೆರಿಕ ಇತಿಹಾಸದಲ್ಲೇ ಹೊಸ 'ಇತಿಹಾಸ' ನಿರ್ಮಿಸಿದೆ. ಒಬಾಮ ವ್ಯಯಿಸುತ್ತಿರುವ ಹಣ ಈ ಹಿಂದಿನ ಅಧ್ಯಕ್ಷರನ್ನು ಮೀರಿಸಿದ್ದಾರೆ, 2005ರಲ್ಲಿ ಜಾರ್ಜ್ ಡಬ್ಲ್ಯು ಬುಷ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಖರ್ಚಾದದ್ದು 42.3ಮಿಲಿಯನ್ ಡಾಲರ್, 1993ರಲ್ಲಿ ಅಧ್ಯಕ್ಷ ಪಟ್ಟ ಏರಿದ್ದ ಬಿಲ್ ಕ್ಲಿಂಟನ್ ವ್ಯಯಿಸಿದ್ದು 33ಮಿಲಿಯನ್ ಡಾಲರ್, ಆದರೆ ಒಬಾಮ ಅವರದ್ದು 150ಮಿಲಿಯನ್ ಡಾಲರ್ ಅಬ್ಬಾ ಎಂದು ಹುಬ್ಬೇರಿಸಬೇಡಿ. ಪ್ರಥಮ ಕಪ್ಪು ವರ್ಣಿಯ ಒಬಾಮ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಅಂದಾಜು 1.5ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಇದೆ.ಶ್ವೇತಭವನ ಪ್ರವೇಶಿಸಲಿರುವ 'ಕಪ್ಪು ದೊರೆ'ಯ ರಾಜವೈಭವ ಸಿದ್ದತೆಯ (ಸಿಎನ್‌ಎನ್-ಐಬಿಎನ್ ಹಾಗೂ ಎಪಿ ಕಲೆ ಹಾಕಿರುವ) ವಿವರಗಳನ್ನು ಇಲ್ಲಿ ನೀಡಲಾಗಿದೆ.ಒಂದು ಟನ್ ಚಾಕೋಲೆಟ್ ಹಾಗೂ ಬಿಳಿಯ ಚೀಸ್, 1,500 ಬಾಕ್ಸ್ ಬಿಯರ್, 800 ಪೌಂಡ್ (363ಕೆಜಿ)ಕಾಡೆಮ್ಮೆ ಮಾಂಸಇದು ವಾಷಿಂಗ್ಟನಲ್ಲಿನ ಪ್ರತಿಷ್ಠಿತ ಮಾರಿಯಟ್ ವಾರ್ಡಮನ್ ಹೊಟೇಲ್‌ನಲ್ಲಿ ಈಗಾಗಲೇ 49ಸಾವಿರ ಜನರಿಗೆ ಭೂರಿಭೋಜನ ವ್ಯವಸ್ಥೆಯ ಕೆಲವೊಂದು ಐಟಂಗಳು ಮಾತ್ರ. ಈ ಸೇವೆ ಜನವರಿ 17ರಿಂದ ಆರಂಭಗೊಂಡು 20ರವರೆಗೆ ಮುಂದುವರಿಯಲಿದೆ.ಒಬಾಮ ಅಧ್ಯಕ್ಷ ಪಟ್ಟ ಅಲಂಕಾರಿಸುವ ಸಂದರ್ಭದಲ್ಲಿ ಈ ಮಟ್ಟದಲ್ಲಿ ಸಮಾರಂಭ ಹಾಗೂ ಭೋಜನ ವ್ಯವಸ್ಥೆ ಮಾಡಿರುವ ಕುರಿತು ವಾರ್ಡಮನ್ ನಿರ್ದೇಶಕ ಕ್ರಿಸ್ಟೋಫರ್ ಒಟ್ವೆ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಹೊಟೇಲ್ ಬಾಣಸಿಗರ ಕೈಯಲ್ಲಿರುವ ಅಡುಗೆಯ ಪಟ್ಟಿಯನ್ನು ನೋಡಿದ್ರೆ ಅಯ್ಯೋ ದೇವರೆ ಎಂದು ಉದ್ಘಾರಿಸುತ್ತಾರೆ ಕ್ರಿಸ್ಟೋಫರ್.ಉದ್ಘಾಟನಾ ಪರೇಡ್, ಸ್ನೇಹ ಕೂಟ ನರ್ತನ, ನ್ಯಾಶನಲ್ ಮಾಲ್‌ನಲ್ಲಿ ಅಳವಡಿಸಿರುವ ಬೃಹತ್ ಟೆಲಿವಿಷನ್ ಹಾಗೂ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಿತಿಯ ವೆಚ್ಚವೇ 40ಮಿಲಿಯನ್ ಡಾಲರ್.ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಸಮಿತಿಯಲ್ಲಿ ಒಟ್ಟು 432 ಸದಸ್ಯರು.ಬರಾಕ್ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆಗಾಗಿಯೇ ಈವರೆಗೆ 240,000 ಟಿಕೆಟ್ ಅನ್ನು ಉಚಿತವಾಗಿ ಹಂಚಲಾಗಿದೆ.ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಗಾಗಿ 58 ಜನರು ಕಾರ್ಯನಿರ್ವಹಿಸಲಿದ್ದಾರೆ.ದೇಶದ ವಿವಿಧೆಡೆಯಿಂದ ಬಾಡಿಗೆ ನೆಲೆಯಲ್ಲಿ ಸೇರಿದಂತೆ ಒಟ್ಟು 8 ಸಾವಿರ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರತರಾಗಲಿದ್ದಾರೆ.1 ಸಾವಿರ ಅಮೆರಿಕ ಪಾರ್ಕ್ ಪೊಲೀಸ್ ಅಧಿಕಾರಿಗಳು.ಸಂಚಾರ ವ್ಯವಸ್ಥೆ ನಿರ್ವಹಣೆಗೆ 550 ಮೆಟ್ರೋ ಪೊಲೀಸ್.ನಗರಾದದ್ಯಂತ ಅಧಿಕಾರಿಗಳಿಗೆ ನೆರವು ನೀಡಲು 10ಸಾವಿರ ನ್ಯಾಶನಲ್ ಗಾರ್ಡ್ಸ್‌ಗಳು.ಅಧಿಕಾರ ಸ್ವೀಕಾರ ಸಮಾರಂಭದ ದಿನದಂದು ಮೆಟ್ರೋ ರೈಲಿನಲ್ಲಿ ಪ್ರತಿ ಗಂಟೆಗೆ 20ಸಾವಿರ ಜನರನ್ನು ಕರೆ ತರುವ ವ್ಯವಸ್ಥೆ.ಅಮೆರಿಕ ಮೆಟ್ರೋ ರೈಲು ಮಾರ್ಗಗಳ 2 ಮಿಲಿಯನ್ ಮ್ಯಾಪ್‌ಗಳ ಹಂಚಿಕೆ.ಜನರ ಸಾಗಾಟಕ್ಕಾಗಿ ಸುಮಾರು 10ಸಾವಿರ ಬಸ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ.ವಾಷಿಂಗ್ಟನ್‌ನಲ್ಲಿನ 600 ಹೊಟೇಲ್‌ಗಳು ಈಗಾಗಲೇ ಭರ್ತಿ.ಅಧಿಕಾರ ಸ್ವೀಕಾರ ಸಮಾರಂಭದ ಪರೇಡ್ ಹಾಗೂ ಮಾರ್ಚಿಂಗ್ ಬ್ಯಾಂಡ್‌ನಲ್ಲಿ 13 ಸಾವಿರ ಮಿಲಿಟರಿ ಮತ್ತು ನಾಗರಿಕರು ಪಾಲ್ಗೊಳ್ಳಲಿದ್ದಾರೆ.ಪರೇಡ್ ನಡೆಯಲಿರುವ ಪೆನ್ನಾಸೆಲ್ವಾನಿಯಾ ಅವೆನ್ಯೂ ರಸ್ತೆಯಲ್ಲಿ 112 ಲೈಟ್ಸ್‌ಗಳ ಬದಲಾವಣೆ.ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆಗಾಗಿ ನ್ಯಾಷನಲ್ ಮಾಲ್‌ನಲ್ಲಿ 10 ಬೃಹತ್ ಸ್ಕ್ರೀನ್ ಅಳವಡಿಕೆ.ನಗರಾದ್ಯಂತ 15 ರಿಂದ 18ಸಾವಿರ ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸಲಿದ್ದಾರೆ.ಸಾರ್ವಜನಿಕರ ಅನುಕೂಲಕ್ಕಾಗಿ 4,100 ತಾತ್ಕಾಲಿಕ ಶೌಚಾಲಯ ನಿರ್ಮಾಣ.ಅಧಿಕಾರ ಸ್ವೀಕಾರ ಸಮಾರಂಭಕ್ಕಾಗಿ 10ಸಾವಿರ ಚದರ ಅಡಿಯ ವೇದಿಕೆ. |