ಎರಡು ಅವಧಿಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಾರ್ಜ್ ಡಬ್ಲ್ಯು ಬುಷ್ ದೇಶವನ್ನು ಪ್ರೀತಿಸುವ ಅವರೊಬ್ಬ ಒಳ್ಳೆಯ ಮನುಷ್ಯ, ಆದರೆ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುತ್ತಿರುವ ಅವರು ತಾವು ಕೈಗೊಂಡು ಕೆಲವೊಂದು ತಪ್ಪು ನಿರ್ಧಾರಗಳೊಂದಿಗೆ ನಾವು ಹೋರಾಡಬೇಕಾಗಿದೆ ಎಂದು ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಷ್ ಆಡಳಿತಾವಧಿಯಲ್ಲಿ ಎರಡು ಸಮರ ಹಾಗೂ ಭಾರೀ ಆರ್ಥಿಕ ದಿವಾಳಿತನದ ಹೊಡೆತದ ನಡುವೆ ಜನವರಿ 20ರಂದು ಬರಾಕ್ ಶ್ವೇತಭವನ ಪ್ರವೇಶಿಸಲಿದ್ದಾರೆ.
ಅಧ್ಯಕ್ಷೀಯ ಚುನಾನಾಣಾ ಪ್ರಚಾರ ಸಂದರ್ಭದಲ್ಲಿ ರಿಪಬ್ಲಿಕನ್ ಅಧ್ಯಕ್ಷ ಬುಷ್ ಬಗ್ಗೆ ಟೀಕೆ ವ್ಯಕ್ತಪಡಿಸಿದ ಕುರಿತು ಸಿಎನ್‌ಎನ್ ಸಂದರ್ಶನದಲ್ಲಿ ಬರಾಕ್ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ನನ್ನ ಪ್ರಚಾರ ಕಾರ್ಯದಲ್ಲಿ ಪ್ರತಿ ಬಾರಿಯೂ ಬುಷ್ ಅವರೊಬ್ಬ ಒಳ್ಳೆಯ ವ್ಯಕ್ತಿ ಎಂಬ ಬಗ್ಗೆ ಹೇಳಿದ್ದೆ, ಆದರೆ ಅವರು ಕೈಗೊಂಡ ಕೆಲವು ನಿಲುವುಗಳನ್ನು ಟೀಕಿಸಿರುವುದಾಗಿ ಹೇಳಿದರು.
ವೈಯಕ್ತಿಕವಾಗಿ ಹೇಳುವುದಾದರು ಕೂಡ ಬುಷ್ ಅವರೊಬ್ಬ ಉತ್ತಮ ಮನುಷ್ಯ, ತನ್ನ ಕುಟುಂಬ ಹಾಗೂ ದೇಶವನ್ನು ಪ್ರೀತಿಸಿದವರು. ಕೆಲವೊಂದು ಬಿಕ್ಕಟ್ಟಿನ ಸಂದರ್ಭದಲ್ಲೂ ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದರು. ಹಾಗಂತ ಇದು ಪೂರ್ಣ ಪ್ರಮಾಣವಾಗಿ ನಾನು ನೀಡುವ ಪ್ರಮಾಣಪತ್ರವಲ್ಲ, ಕೆಲವೊಂದು ತಪ್ಪು ನಿರ್ಧಾರಗಳು ಆಗಿವೆ. ನಾವೀಗ ಆ ತಪ್ಪು ನಿರ್ಧಾರಗಳನ್ನು ಸರಿಪಡಿಸುವತ್ತ ಹೆಜ್ಜೆ ಇಡಬೇಕಾಗಿದೆ ಎಂದರು. |