ಉತ್ತರ ಗಾಜಾಪಟ್ಟಿಯ ಸಮೀಪದಲ್ಲಿನ ವಿಶ್ವಸಂಸ್ಥೆ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದೆ.
ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ ಮೂರು ವಾರಗಳಿಂದ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮುಂದುವರಿದಿದ್ದು, ಸುಮಾರು 1600ಜನರಿಂದ ತುಂಬಿದ್ದ ಶಾಲೆಯೊಂದರ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿರುವುದಾಗಿ ವಕ್ತಾರ ಚಾರಿಸ್ ಗುನ್ನೆಸ್ ತಿಳಿಸಿದ್ದಾರೆ.
ಹಮಾಸ್ ಉಗ್ರರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದ ಇಸ್ರೇಲ್ ಶಾಲೆ ಮೇಲೆ ನಡೆಸಿರುವ ದಾಳಿ ಆಘಾತಕಾರಿಯಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಗುನ್ನೆಸ್, ಯಾವುದೇ ಯುದ್ದಾಪರಾಧಗಳನ್ನು ಮಾಡಿರುವ ಕುರಿತು ತನಿಖೆ ನಡೆಸಿ, ಆರೋಪಿತರು ಎಂದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. |