ಕಳೆದ 22ದಿನಗಳಿಂದ ಪ್ಯಾಲೆಸ್ತೇನಿನ ಗಾಜಾಪಟ್ಟಿ ಮೇಲೆ ನಡೆಸುತ್ತಿದ್ದ ಕದನಕ್ಕೆ ವಿರಾಮ ಹಾಕಿರುವುದಾಗಿ ಇಸ್ರೇಲ್ ಭಾನುವಾರ ತಿಳಿಸಿದೆ.
ಗಡಿವಿವಾದ ಹಾಗೂ ಪ್ರತ್ಯೇತಕೆಯ ಕೂಗಿನ ಹಮಾಸ್ ಉಗ್ರರ ಬೇಡಿಕೆಯನ್ನು ತಿರಸ್ಕರಿಸುತ್ತಲೇ ಬಂದಿರುವ ಇಸ್ರೇಲ್ ಕಳೆದ 22ದಿನಗಳಿಂದ ಸಮರ ಸಾರಿತ್ತು, ದಾಳಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ವಿಶ್ವಸಂಸ್ಥೆಗೆ ಸೇರಿದ ಶಾಲೆ, ಹಮಾಸ್ ಮುಖಂಡ, ಪ್ರಯೋಗಾಲಯಗಲೆಲ್ಲ ಧ್ವಂಸವಾಗಿತ್ತು.
ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಸೇರಿದಂತೆ ಪ್ರಪಂಚದಾದ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರು ಕೂಡ ಇಸ್ರೇಲ್ ಮಾತ್ರ ತನ್ನ ಸಮರದ ಪಟ್ಟನ್ನು ಸಡಿಲಿಸಿರಲಿಲ್ಲವಾಗಿತ್ತು.
ಅಂತೂ ಕೂನೆಗೂ ಕದನ ವಿರಾಮ ಘೋಷಿಸಿರುವುದಾಗಿ ಹೇಳಿರುವ ಇಸ್ರೇಲ್, ಗಾಜಾ ಮೇಲೆ ಹದ್ದಿನ ಕಣ್ಣು ಇಟ್ಟಿರುವುದಾಗಿ ಎಚ್ಚರಿಕೆ ನೀಡಿದೆ.
ಹಮಾಸ್ ಮತ್ತೆ ರಾಕೆಟ್ ದಾಳಿ: ಏತನ್ಮಧ್ಯೆ ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ ಮೇಲೆ ಸತತವಾಗಿ ರಾಕೆಟ್ ದಾಳಿ ನಡೆಸಿವೆ. ಹಮಾಸ್ ಉಗ್ರರು ಒಟ್ಟು ಆರು ರಾಕೆಟ್ ದಾಳಿ ನಡೆಸಿರುವುದಾಗಿ ರೆಡಿಯೋ ವರದಿ ತಿಳಿಸಿದೆ. |