ಸಾಂಸ್ಕೃತಿಕ ಹಾಗೂ ಇನ್ನಿತರ ವಿಷಯಗಳ ಮೇಲೆ 124 ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡುವ ಮೂಲಕ ಫ್ರೆಂಚ್‌ನ ಲೂಯಿಸ್ ಕೊಲೆಟ್ ಗಿನ್ನೆಸ್ 'ಮಾತಿನ ಮಲ್ಲ' ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಫ್ರಾನ್ಸ್ ನಗರವಾದ ಪರ್‌ಪಿಗಾನ್‌ನಲ್ಲಿ 62ರ ಹರೆಯದ ಸ್ಥಳೀಯ ಸರ್ಕಾರಿ ನೌಕರರಾಗಿರುವ ಕೊಲೆಟ್ ನಾಲ್ಕು ರಾತ್ರಿ ಸೇರಿದಂತೆ ಸತತ ಐದು ದಿನಗಳ ಕಾಲ ನಿರರ್ಗಳವಾಗಿ ಮಾತನಾಡುವ ಮೂಲಕ ದೀರ್ಘಕಾಲ ಮಾತನಾಡಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೊಲೆಟ್ ಅವರ ನಿರರ್ಗಳ ಮಾತನ್ನು ಆಲಿಸಿರುವ ಮೂರು ಮಂದಿ ನೋಟರಿಗಳು ಗಿನ್ನೆಸ್ ದಾಖಲೆ ಸೇರುವ ನಿಟ್ಟಿನಲ್ಲಿ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಈ ಮೊದಲು ಭಾರತೀಯ ವ್ಯಕ್ತಿಯೊಬ್ಬರು ಸುದೀರ್ಘವಾಗಿ 120ಗಂಟೆಗಳ ಕಾಲ ಮಾತನಾಡಿದ ದಾಖಲೆ ಇದ್ದಿತ್ತು. ಇದೀಗ ಕೊಲೆಟ್ 124ಗಂಟೆಗಳ ಕಾಲ ಮಾತನಾಡಿ ಈ ದಾಖಲೆಯನ್ನು ಮುರಿದಿದ್ದಾರೆ.
ಭಾರೀ ಜನಸಂಖ್ಯೆಯ ಪ್ರೋತ್ಸಾಹದೊಂದಿಗೆ ಕೊಲೆಟ್ ನಿರರ್ಗಳ ಐದು ದಿನಗಳ ಮಾತನ್ನು ಮುಗಿಸಿದ್ದರು. ಅವರು 2004ರಲ್ಲಿಯೂ 48ಗಂಟೆಗಳ ಕಾಲ ನಿರಂತರವಾಗಿ ಮಾತನಾಡಿ ದಾಖಲೆ ನಿರ್ಮಿಸಿದ್ದರು.
|