ಅರಣ್ಯಪ್ರದೇಶ ಸಮೀಪದ ಧರ್ಮಾಪುರಂನಲ್ಲಿ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂನ ವರಿಷ್ಠ ವೇಳುಪಿಳ್ಳೈ ಪ್ರಭಾಕರನ್‌ನ ಐಷಾರಾಮಿ ಬಂಕರ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಶ್ರೀಲಂಕಾ ಆರ್ಮಿ ಸೋಮವಾರ ತಿಳಿಸಿದೆ.ಎಲ್‌ಟಿಟಿಇಯ ವರಿಷ್ಠ ಪ್ರಭಾಕರನ್ ಅಡಗುತ್ತಿದ್ದ ಅಧಿಕೃತ ಅಡಗುತಾಣದ ಛಾಯಚಿತ್ರವನ್ನು ಶ್ರೀಲಂಕಾ ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿದೆ. ಹವಾನಿಯಂತ್ರಿತ ಸುಸಜ್ಜಿತ, ಶಸ್ತ್ರ ಸಜ್ಜಿತ ಐಶಾರಾಮಿ ಬಂಕರ್ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ಸೇನಾ ಮೂಲ ವಿವರಿಸಿದೆ.ಪ್ರಾಬಲ್ಯ ಕುಂದಿರುವ ಪ್ರಭಾಕರನ್ ಶ್ರೀಲಂಕಾದಿಂದ ಪರಾರಿಯಾಗಿದ್ದು, ಭಾರತದಲ್ಲಿ ಆಶ್ರಯ ಪಡೆದಿರುವುದಾಗಿ ಈ ಮೊದಲು ಶ್ರೀಲಂಕಾ ಆರ್ಮಿ ವರಿಷ್ಠ ಸಾರಥ್ ಫೋನ್‌ಸೆಕಾ ಶಂಕೆ ವ್ಯಕ್ತಪಡಿಸಿದ್ದರು.ಆದರೆ ಪ್ರಭಾಕರನ್ ಎಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದಿರುವ ಅವರು, ಆತ ಪರಾರಿಯಾಗುವ ಹಾದಿಯಲ್ಲಿರುವುದಾಗಿ ಭಾನುವಾರ ಸಂಜೆ ಫೋನ್‌ಸೆಕಾ ತಿಳಿಸಿದ್ದರು.ಏತನ್ಮಧ್ಯೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾಕಾಂಡದಲ್ಲಿ ಮೋಸ್ಟ್ ವಾಟೆಂಡ್ ಆಗಿರುವ ಪ್ರಭಾಕರನ್ ಭಾರತದಲ್ಲಿ ಆಶ್ರಯ ಪಡೆಯುವುದನ್ನು ತಳ್ಳಿಹಾಕಿದ್ದಾರೆ. ಅಲ್ಲದೇ 54ರ ಹರೆಯದ ಗೆರಿಲ್ಲಾ ಮುಖಂಡ ಪ್ರಭಾಕರನ್ ಮುಲ್ಲೈತ್ತಿವ್ ನಗರದಲ್ಲಿಯೇ ಅಡಗಿರಬೇಕೆಂದು ಫೋನ್‌ಸೆಕಾ ನಂಬಲಾಗಿತ್ತು.ಅಲ್ಲದೇ ಪ್ರಭಾಕರನ್ ಭಯೋತ್ಪಾದಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅಮೆರಿಕವಾಗಲಿ, ಯುನೈಟೆಡ್ ಕಿಂಗ್‌ಡಂನತ್ತಲೂ ಪರಾರಿಯಾಗುವ ಸಾಧ್ಯತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.54 ರ ಹರೆಯದ ಪ್ರಭಾಕರನ್ ಶಾಲೆಯಿಂದ ಹೊರಬಿದ್ದ ಬಳಿಕ,1972ರಲ್ಲಿ ಪ್ರತ್ಯೇಕ ತಮಿಳುರಾಜ್ಯ ಕನಸಿನೊಂದಿಗೆ ಎಲ್‌ಟಿಟಿಇ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ. ಸಂಘಟನೆಯಲ್ಲಿ ಆತ್ಮಹತ್ಯಾ ಬಾಂಬರ್‌ಗಳನ್ನು ಹೆಚ್ಚಾಗಿ ತರಬೇತುಗೊಳಿಸಲಾಗುತ್ತಿತ್ತು. ಭಾರತದ ಮಾಜಿ ಪ್ರಧಾನಿ ರಾಜೀವ್ ಹತ್ಯಾದ ಹೊಣೆ ಕೂಡ ಪ್ರಭಾಕರನ್ ಹೊತ್ತುಕೊಂಡಿದ್ದ. ಅದರಂತೆ ಶ್ರೀಲಂಕಾ ಅಧ್ಯಕ್ಷ ರಾಣಾಸಿಂಘೆ ಪ್ರೇಮಾದಾಸಾ ಅವರನ್ನು ಕೂಡ ಎಲ್‌ಟಿಟಿಇ 1993ರಲ್ಲಿ ಕೊಲೆಗೈದಿತ್ತು. |