ಅಮೆರಿಕ ಒಂದೆಡೆ ಆರ್ಥಿಕ ಹೊಡೆತದಿಂದ ತತ್ತರಿಸಿಹೋಗಿದ್ದರೆ, ಮತ್ತೊಂದೆಡೆ ಪ್ರಪ್ರಥಮ ಕಪ್ಪು ವರ್ಣೀಯ ಬರಾಕ್ ಒಬಾಮ ಅವರ ಅಧ್ಯಕ್ಷ ಪಟ್ಟ ಏರಲು ಆಯೋಜಿಸಿರುವ ಸಮಾರಂಭವೇ ಹೊಸ ಇತಿಹಾಸ ಸೃಷ್ಟಿಸಿದ್ದರೆ, ಅವರಿಗಾಗಿಯೇ ಓಡಾಡಲು ವಿಶೇಷವಾಗಿ ತಯಾರಿಸಿರುವ ಕಾರು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಒಬಾಮ ಅವರ ಕಾರಿನ ವಿವರ: ಕಾರಿನ ಬೆಲೆ-3000000 ಪೌಂಡ್, ಉದ್ದ-18 ಅಡಿ, ಎತ್ತರ-5 ಅಡಿ,10 ಇಂಚು, ಎಂಜಿನ್-6.5ಲೀಟರ್ ಡಿಸೇಲ್ ಇಂಜಿನ್, ಗರಿಷ್ಠ ವೇಗ-60ಎಂಪಿಎಚ್, ಇಂಧನ ಬಳಕೆ-ಗ್ಯಾಲನ್‌ಗೆ ಎಂಟು ಮೈಲಿ.ಆಸನ:ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಮಡಚಬಹುದಾದ ಡೆಸ್ಕ್ ಟಾಪ್, ಲ್ಯಾಪ್ ಟ್ಯಾಪ್ ಕಂಪ್ಯೂಟರ್‌ಗಳನ್ನು ವೈ-ಫೈ ಸಹಿತ ಅಳವಡಿಸಲಾಗಿದೆ. ಕಟ್ಟೆಚ್ಚರ ಸೆಟಲೈಟ್ ಫೋನ್ ಮತ್ತು ಉಪಾಧ್ಯಕ್ಷರು ಹಾಗೂ ಪೆಂಟಗಾನ್‌ಗೆ ನೇರ ಸಂಪರ್ಕ ಇದೆ.ಕಾರಿನ ಬಾಗಿಲುಗಳು ಲೋಹದಿಂದ ನಿರ್ಮಿತವಾಗಿದ್ದು, 8 ಇಂಚು ದಪ್ಪವಾಗಿದೆ. ಬೋಯಿಂಗ್ 757 ಜೆಟ್ ವಿಮಾನದ ಬಾಗಿಲಿಗೆ ಸಮಾನದ ತೂಕ.ಚಾಲಕನ ಭಾಗದಲ್ಲಿ ಗುಣಮಟ್ಟದ ಸ್ಟಿಯರಿಂಗ್ ವೀಲ್ ಇದೆ. ಡ್ಯಾಷ್ ಬೋರ್ಡ್ ಸಂಪರ್ಕ ಕೇಂದ್ರ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದೆ. ಕಾರಿನ ಬಾಡಿಯನ್ನು ಉಕ್ಕು-ಅಲ್ಯೂಮಿನಿಯಂ, ಬಿಟೇನಿಯಂ ಮತ್ತು ಸೆರಾಮಿಕ್‌ನ ದುಪ್ಪಟ್ಟು ಕಾಠಿಣ್ಯ ಹೊಂದಿದೆ.ಚಾಲಕನ ಕಿಟಕಿ ಲೋಹಭೇದಕ ಬುಲೆಟ್‌ಗಳಿಗೂ ಅಬೇಧ್ಯವಾಗಿದೆ. ಕೇವಲ ಮೂರು ಇಂಚು ಮಾತ್ರ ತೆರೆದುಕೊಳ್ಳುತ್ತದೆ. ಹೀಗಾಗಿ ಚಾಲನೆ ಮಾಡುತ್ತಿರುವಾಗಲೇ ಚಾಲಕ ಗುಪ್ತಚರ ಸೇವಾ ಏಜೆಂಟರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯ.ಇದಕ್ಕೆ ಸಿಐಎನಿಂದ ತರಬೇತಿ ಪಡೆದ ಚಾಲಕನ ನೇಮಕ. ಹಿಂಬದಿಯ ಗಾಜಿನ ವಿಭಜಕಗಳಿರುವ ನಾಲ್ಕು ಆಸನಗಳಿವೆ. ಅದನ್ನು ಕೆಳಗಿಳಿಸುವ ಸ್ವಿಚ್ ಒಬಾಮ ಬಳಿ ಮಾತ್ರ ಇರುತ್ತದೆ. ತುರ್ತು ಸಂದರ್ಭದಲ್ಲಿ ಕರೆ ನೀಡಲು ಸ್ವಿಚ್ ಕೂಡ ಹೊಂದಿದೆ.ಪೆಟ್ರೋಲ್ ಟ್ಯಾಂಕ್ ಅನ್ನು ಲೋಹದ ಹಾಳೆಯಿಂದ ನಿರ್ಮಿತವಾಗಿದ್ದು, ನೇರ ದಾಳಿಗೆ ಸಿಲುಕಿದರೂ ಸ್ಫೋಟಕ್ಕೆ ಒಳಗಾಗದಂತೆ ವಿನ್ಯಾಸಗೊಳಿಸಲಾಗಿದೆ. ಆಮ್ಲಜನಕ ಪೂರೈಕೆ ಮತ್ತು ಅಗ್ನಿಶಾಮಕ ವ್ಯವಸ್ಥೆ ಒಳಗೊಂಡಿದೆ.ಚಕ್ರಗಳು ಪಂಕ್ಟರ್ ನಿರೋಧಕವಾಗಿದ್ದು, ಕೆಳಗಡೆ ಉಕ್ಕಿನ ರಿಮ್, ಇದು ಟಯರ್ ಸ್ಫೋಟಗೊಂಡರು ರಿಮ್‌ನಿಂದಲೇ ಕಾರು ಅದೇ ವೇಗದಲ್ಲಿ ಚಲಿಸುತ್ತದೆ.ನೆಲಬಾಂಬ್‌ಗಳಿಗೂ ಜಗ್ಗದ ಈ ಕಾರಿನಲ್ಲಿ ಕತ್ತಲಿನಲ್ಲಿಯೂ ಕಾರ್ಯನಿರ್ವಹಿಸುವ ಕ್ಯಾಮರಾ, ತುರ್ತು ರಕ್ತ ಪೂರೈಸುವ ನಿಟ್ಟಿನಲ್ಲಿ ಅಧ್ಯಕ್ಷರ ಗುಂಪಿನ ರಕ್ತದ ಬಾಟಲ್‌ಗಳನ್ನು ಶೇಖರಿಸಿಡಲಾಗಿದೆ. ಒಟ್ಟಾರೆಯಾಗಿ ಒಬಾಮ ಅವರ ಕಾರು ರಾಕೆಟ್ ದಾಳಿಯನ್ನು ತಡೆಯುತ್ತದೆಯಂತೆ. |