ವಿಶ್ವದ ದೊಡ್ಡಣ್ಣ ಎಂಬ ಹೆಗ್ಗಳಿಕೆಗೆ ಅಮೆರಿಕದ 44ನೇ ಅಧ್ಯಕ್ಷರಾಗಿ ಮಂಗಳವಾರ ಅಮೆರಿಕದ ಕ್ಯಾಪಿಟಲ್ ಹಿಲ್‌ನ ಪಶ್ಚಿಮ ದ್ವಾರದ ಬಳಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ 10.30ಕ್ಕೆ) ಬೃಹತ್ ಜನಸ್ತೋಮದ ನಡುವೆ ಮುಖ್ಯನ್ಯಾಯಮೂರ್ತಿ ಜಾನ್ ರಾಬರ್ಟ್ ಅವರಿಂದ ಪ್ರಮಾಣ ವಚನ ಸ್ವೀಕರಿಸುತ್ತಿರುವ ಪ್ರಥಮ ಕಪ್ಪು ವರ್ಣೀಯ ಬರಾಕ್ ಒಬಾಮ ಅವರು ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ.ಬರಾಕ್ ಅವರಿಗಿಂತ ಮುನ್ನ ಉಪಾಧ್ಯಕ್ಷ ಜೋಯ್ ಬಿಡೆನ್ ಅವರೂ ಪ್ರಮಾಣ ವಚನ ಸ್ವೀಕರಿಸುವ ಈ ಸಮಾರಂಭಕ್ಕಾಗಿ ಇಡೀ ವಾಷಿಂಗ್ಟನ್ ಡಿಸಿಯನ್ನು ರಕ್ಷಣಾ ದಳಗಳು ಅಭೇದ್ಯ ಕೋಟೆಯಾಗಿ ಪರಿವರ್ತಿಸಿದ್ದವು.ಸ್ಯಾನ್ ಫ್ರಾನ್ಸಿಸ್ಕೋ ಹಿಮ್ಮೇಳ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುವತಿಯರ ಕೋರಸ್ ಸಹಿತ ಅಮೆರಿಕ ಮರೀನ್ ಬ್ಯಾಂಕ್ ತಂಡದ ಸಂಗೀತ ಕಾರ್ಯಕ್ರಮಕ್ಕೆ ಅಲ್ಲಿ ನೆರೆದಿದ್ದ ಭಾರೀ ಜನಸ್ತೋಮ ಅದಾಗಲೇ ಹುಚ್ಚೆದ್ದು ಕುಣಿಯಲಾರಂಭಿಸಿದ್ದವು.ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಸೆನೆಟರ್ ಡಿಯಾನ್ನೇ ಫೀನ್‌ಸ್ಟಿನ್ ಸ್ವಾಗತ ಭಾಷಣ ಮಾಡಿದ್ದು, ವಾಷಿಂಗ್ಟನ್‌ನಲ್ಲಿ ಸುಮಾರು 20 ಲಕ್ಷ ಮಂದಿ ಸೇರಿದ್ದರು. ಜಗತ್ತಿನಾದ್ಯಂತ ಟಿವಿ ಮೂಲಕ 105 ಕೋಟಿ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕಾಗಿ ಒಟ್ಟು 781 ಕೋಟಿ ರೂ.ವ್ಯಯಿಸಲಾಗಿದ್ದು, 50 ಸಾವಿರ ಜನರಿಗೆ ಮಾಂಸಹಾರ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ.ಚರ್ಚ್‌ನಲ್ಲಿ ಪ್ರಾರ್ಥನೆ: ಅಧಿಕಾರ ಸ್ವೀಕಾರಕ್ಕೂ ಮುನ್ನ ಕ್ಯಾಪಿಟಲ್ ಹಿಲ್‌ಗೆ ಬರುವ ಮೊದಲು ಬರಾಕ್ ಅವರು ತಮ್ಮ ಕುಟುಂಬದೊಂದಿಗೆ ಸೈಂಟ್ ಜಾನ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.ನಿರ್ಗಮನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗಿಂತ ಹೆಚ್ಚಾಗಿ ಭಾವುಕರಾದವರು ಅವರ ತಂದೆ ಜಾರ್ಜ್ ಎಚ್ ಡಬ್ಲ್ಯು ಬುಷ್ ಹಾಗೂ ತಾಯಿ ಬಾರ್ಬರಾಬುಷ್ ಭಾರವಾದ ಹೃದಯಗಳಿಂದ ಶ್ವೇತಭವನಕ್ಕೆ ವಿದಾಯ ಹೇಳಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಬರಾಕ್ ಒಬಾಮ, ಪ್ರಥಮ ಮಹಿಳೆ ಮಿಶೆಲ್ ಹಾಗೂ ಮಕ್ಕಳು ಬುಷ್ ಅವರನ್ನು ಆತ್ಮೀಯವಾಗಿ ಬಿಗಿದಪ್ಪುವ ಮೂಲಕ ಬೀಳ್ಕೊಟ್ಟರು.ತಮ್ಮ ಮಗ ಬುಷ್ ಅವರ ಅಧಿಕಾರಾವಧಿಯ ಕಟ್ಟಕಡೆಯ ರಾತ್ರಿ ಅವರಿಗೆ ಸುದೀರ್ಘವಾಗಿ ಪರಿಣಮಿಸಿತು. ಮತ್ತೆ ನಾವು ಶ್ವೇತಭವನಕ್ಕೆ ಬಂದು ಹೋಗುವ ಅವಕಾಶದಿಂದ ವಂಚಿತರಾಗುತ್ತಿದ್ದೇವೆ ಎಂದು ಹಿರಿಯ ಬುಷ್ ಅಲವತ್ತುಕೊಂಡರು.ಬರಾಕ್ ಅಧಿಕಾರ ಸ್ವೀಕಾರ ಸಮಾರಂಭದ ವಿವರ:ಅಮೆರಿಕದ ಕ್ಯಾಪಿಟಲ್ ಹಿಲ್‌ನ ಪಶ್ಚಿಮ ದ್ವಾರವನ್ನು 8 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 6.30) ತೆರೆದಿದ್ದು.10 ಗಂಟೆಗೆ (ಭಾರತೀಯ ಕಾಲಮಾನ 8.30)ಸಮಾರಂಭದ ಕಾರ್ಯಕ್ರಮಕ್ಕೆ ಚಾಲನೆ. ಸುಮಾರು ಎರಡು ಗಂಟೆಗಳ ಕಾಲ ಸಂಗೀತ ರಸಮಂಜರಿ ಕಾರ್ಯಕ್ರಮದ ಅಬ್ಬರ.11.45 ಕ್ಕೆ (ಭಾರತೀಯ ಕಾಲಮಾನ 10.15) ಜೊಯ್ ಬಿಡೆನ್ ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.12 ಗಂಟೆಗೆ (ಭಾರತೀಯ ಕಾಲಮಾನ 10.30) ಅಬ್ರಹಾಂ ಲಿಂಕನ್ ಪ್ರಮಾಣವಚನ ಸ್ವೀಕರಿಸಿದ ಬೈಬಲ್ ಮೇಲೆಯೇ ಕೈಯಿರಿಸಿ ಬರಾಕ್ ಒಬಾಮ ಅವರಿಂದ ಪ್ರಮಾಣ ವಚನ.12.05 ಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ.12.30 ಕ್ಕೆ (ಭಾರತೀಯ ಕಾಲಮಾನ 11) ಭಾಷಣದ ಬಳಿಕ, ಒಬಾಮ ಅವರು ಪೂರ್ಣಪ್ರಮಾಣದ ಭದ್ರತೆಯೊಂದಿಗೆ ನಿರ್ಗಮನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಬೀಳ್ಕೊಡುಗೆ ಸಮಾರಂಭ. |