ಅಮೆರಿಕದ 44ನೆ ಅಧ್ಯಕ್ಷರಾಗಿ ಬಾರಾಕ್ ಒಮಾಮ ಅಧಿಕಾರ ಸ್ವೀಕರಿಸುವುದರೊಂದಿಗೆ ವರ್ಣಬೇಧ ನೀತಿಯ ವಿರುದ್ಧ ಧ್ವನಿ ಎತ್ತಿದ್ದ ಮಾರ್ಟಿಲ್ ಲೂಥರ್ ಅವರ ಕನಸು ನನಸು ಮಾಡಿದರು. ಈ ಅಭೂತಪೂರ್ವ ದೃಶ್ಯವನ್ನು ವಿಶ್ವಾದ್ಯಂತ ಮಿಲಿಯಾಂತರ ಮಂದಿ ಕಣ್ಣಲ್ಲಿ ತುಂಬಿಕೊಂಡರು.
ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಅನುಯಾಯಿಯಾಗಿರುವ ಒಬಾಮ, ಲಿಂಕನ್ ಅವರು ಪ್ರಮಾಣವಚನ ಸ್ವೀಕರಿಸಿದ ವೇಳೆ ಕೈಯಿರಿಸಿದ ಬೈಬಲ್ ಮೇಲೆ ಕೈಯಿರಿಸಿ ಪ್ರಮಾಣ ಸ್ವೀಕರಿಸಿದರು. ಈ ಮೂಲಕ 'ಸ್ವಾತಂತ್ರ್ಯದ ಹೊಸ ಹುಟ್ಟಿ'ಗೆ ನಾಂದಿ ಹಾಡಿದರು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ನೆರೆದಿದ್ದ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಒಬಾಮ ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾಗಿರುವ ಅಮೆರಿಕಕ್ಕೆ ಭರವಸೆಯ ಹೊಸ ಮಿಂಚು ಹರಿಸಿದರು.
47ರ ಹರೆಯದ ಒಬಾಮ ತನ್ನ ಹೆಸರಿನಲ್ಲಿದ್ದ ಹುಸೈನ್ ಅನ್ನು ಒತ್ತಿ ಹೇಳಿದರು. ಎಲ್ಲಾ ಸಮುದಾಯ ವರ್ಗಗಳಿಗೆ ಸಮಾನಾವಕಾಶದ ಭರವಸೆ ನೀಡಿದರು.
ಇವರ ಪ್ರಮಾಣ ವಚನಕ್ಕಿಂತ ಮುಂಚಿತವಾಗಿ ಉಪಾಧ್ಯಕ್ಷರಾಗಿ ಜೋಯ್ ಬಿಡೆನ್ ಅಧಿಕಾರ ಸ್ವೀಕರಿಸಿದರು.
|