ಶ್ರೀಲಂಕಾದ ಪೂರ್ವ ಭಾಗದಲ್ಲಿ ಬುಧವಾರ ಎಲ್‌ಟಿಟಿಇ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ನಾಗರಿಕರು ಬಲಿಯಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಲೈತಿವು ತೀರ ಪ್ರದೇಶದಲ್ಲಿ ಲಂಕಾ ಸೇನಾ ಪಡೆ ಮಂಗಳವಾರ ನಾಲ್ಕು ತಮಿಳು ಬಂಡುಕೋರರ ನೌಕೆಗಳನ್ನು ಧ್ವಂಸಗೊಳಿಸಿದ ವಿರುದ್ಧವಾಗಿ ಈ ಆಕ್ರಮಣವನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ. |