ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪತ್ನಿ, ನ್ಯೂಯಾರ್ಕ್ ಸೆನೆಟರ್, ಹಿಲರಿ.ಆರ್.ಕ್ಲಿಂಟನ್ ಅವರು ಗುರುವಾರ ವಿದೇಶಾಂಗ ಕಾರ್ಯದರ್ಶಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ಹಿಲರಿ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವುದನ್ನು ಅಮೆರಿಕ ಸೆನೆಟ್ ಖಚಿತಪಡಿಸಿರುವುದಾಗಿ ವರದಿ ಹೇಳಿದೆ.ಜಾರ್ಜ್ ಬುಷ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಕಾಂಡೋಲಿಸಾ ರೈಸ್ ಅವರ ನಂತರ, ಬರಾಕ್ ಆಡಳಿತದಲ್ಲಿ 67ನೇ ವಿದೇಶಾಂಗ ಕಾರ್ಯದರ್ಶಿಯಾಗಿ ಹಿಲರಿ ಅಧಿಕಾರದ ಗದ್ದುಗೆ ಏರಿದಂತಾಗಿದೆ.ಹಿಲರಿ ಅವರು ಬೈಬಲ್ ಮೇಲೆ ಕೈಯಿರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಾಗಿರುವ ಫೋಗ್ಗಿ ಬೊಟ್ಟಮ್‌ಗೆ ತೆರಳಿ, ತನ್ನ ಕಾರ್ಯವನ್ನು ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. |