ಮಂಗಳವಾರಂದು 44ನೇ ಅಧ್ಯಕ್ಷರಾಗಿ ಅಮೆರಿಕದ ಮುಖ್ಯನ್ಯಾಯಮೂರ್ತಿ ಜಾನ್ ರೋಬರ್ಟ್ ಅವರಿಂದ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ತಡವರಿಸಿದ ಕಾರಣ ಹುಟ್ಟಿಕೊಂಡ ಕಾನೂನು ತೊಡಕಿನಿಂದಾಗಿ, ಬರಾಕ್ ಹುಸೇನ್ ಒಬಾಮ ಅವರು ಬುಧವಾರ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಗುಪ್ತವಿಧಿಯನ್ನು ಮುಖ್ಯನ್ಯಾಯಮೂರ್ತಿಗಳು ಬೋಧಿಸುವ ಸಂದರ್ಭದಲ್ಲಿ ಸ್ಪಷ್ಟವಾಗಿ ಉಚ್ಚರಿಸದೇ ಬರಾಕ್ ಅವರು ತಡವರಿಸಿದ್ದನ್ನು ಕೆಲವು ಸಂವಿಧಾನ ತಜ್ಞರು ಗಂಭೀರವಾಗಿ ಆಕ್ಷೇಪವ್ಯಕ್ತಪಡಿಸಿದ್ದರು. ಮುಖ್ಯನ್ಯಾಯಮೂರ್ತಿ ಅವರು 'ವಿಶ್ವಾಸಾರ್ಹತೆಯಿಂದ' ಎಂಬ ಶಬ್ದವನ್ನು ಬೋಧಿಸಿದಾಗ ಒಬಾಮ ಸ್ಪಷ್ಟವಾಗಿ ಹೇಳಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಒಬಾಮ ಪುನಃ ಪ್ರಮಾಣವಚನ ಸ್ವೀಕರಿಸುವಂತಾಯಿತು.
ಮಂಗಳವಾರ ನಡೆದ ಪ್ರಮಾಣವಚನ ಸಂದರ್ಭದಲ್ಲಿ ಕರಾರುವಕ್ಕಾಗಿ ಸ್ವೀಕರಿಸಲಾಗಿತ್ತು ಎಂದು ನಾವು ನಂಬುತ್ತೇವೆ ಅಲ್ಲದೇ ಅಧ್ಯಕ್ಷರು ಕೂಡ ಸರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ಸ್ಪಷ್ಟನೆ ನೀಡಿರುವ ಶ್ವೇತಭವನದ ವರಿಷ್ಠ ಗ್ರೆಗ್ ಗ್ರೈಗ್, ಆದರೆ ಒಂದು ಶಬ್ದ ಉಚ್ಚಾರಣೆಯಲ್ಲಿ ತೊಡಕು ಉಂಟಾಯಿತು ಎಂದಿದ್ದಾರೆ.
ಸಂವಿಧಾನ ತಜ್ಞರ ಆಕ್ಷೇಪದ ಹಿನ್ನೆಲೆಯಲ್ಲಿ, ಬುಧವಾರ 7.35ಕ್ಕೆ ಬರಾಕ್ ಅವರು ಮುಖ್ಯನ್ಯಾಯಮೂರ್ತಿ ರೋಬರ್ಟ್ ಅವರಿಂದ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದರು. ಅದು ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದು, ಕ್ಯಾಪಿಟಲ್ ಪ್ಲ್ಯಾಟ್‌ಫಾರಂನಲ್ಲಿ ಅಲ್ಲ, ಶ್ವೇತಭವನದ ಮ್ಯಾಪ್ ರೂಂನಲ್ಲಿ ಚಿಕ್ಕ ಮಾಧ್ಯಮ ಗುಂಪಿನ ನಡುವೆ. ಆದರೆ ಎರಡನೇ ಬಾರಿ ಸರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಬರಾಕ್ ಅವರು, ಮಾಧ್ಯಮ ಕಾರ್ಯದರ್ಶಿಯಾದ ರೋಬರ್ಟ್ ಗಿಬ್ಸ್ ಜೊತೆ, ಇದೊಂದು ಒಳ್ಳೆ ಹಾಸ್ಯವಾಗಿದೆ ಎಂದು ನುಡಿದರು.
ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸು ಸಂದರ್ಭದಲ್ಲಿ ಟಿವಿ ವರದಿಗಾರರಾಗಲಿ, ಛಾಯಾಚಿತ್ರಕಾರರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಬೈಬಲ್ ಮೇಲೆ ಕೈಯಿರಿಸದೆ, ಸಾಂಕೇತಿಕವಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು ಎಂದು ಬರಾಕ್ ತಿಳಿಸಿದರು. |