ಅಮೆರಿಕದ ಇಂಡಿಯಾನಾಪೋಲಿಸ್‌ನಲ್ಲಿ ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಮುತ್ತ್ಯಾಲಾ ಪುರುಷೋತ್ತಮ (27) ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ ಜನವರಿ ತಿಂಗಳಿನಲ್ಲಿ ಸಾವನ್ನಪ್ಪಿದ ಎರಡನೇ ಭಾರತೀಯ ಸಾಫ್ಟ್‌ವೇರ್ ಇಂಜಿನಿಯರ್ ಷುರುಷೋತ್ತಮ ಆಗಿದ್ದು, ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿದ್ದ.
ಪುರುಷೋತ್ತಮ ಸಾವಿನ ಬಗ್ಗೆ ಆಂಧ್ರದ ಅನಂತಪುರದಲ್ಲಿರುವ ಕುಟುಂಬಿಕರಿಗೆ ಬುಧವಾರ ಅಮೆರಿಕದಿಂದ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗಿದ್ದು, ಮಂಗಳವಾರ ರಾತ್ರಿ ಪ್ಲ್ಯಾಟ್‌ನಲ್ಲಿನ ಬಾತ್‌ರೂಂನಲ್ಲಿ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾರೆಂದು ಕುಟುಂಬದ ಮೂಲಗಳು ಹೇಳಿವೆ.
ಪುರುಷೋತ್ತಮ ಟ್ರೈಟನ್ ಇನ್ಫೋಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಆಲ್ಲದೇ ಅನಂತಪುರದ 25ರ ಹರೆಯದ ಪ್ರವೀಣಾ ರೆಡ್ಡಿ ಎಂಬಾಕೆಯೊಂದಿಗೆ ವಿವಾಹವಾಗಿತ್ತು.
ಪುರುಷೋತ್ತಮ ಸಾವಿನ ಕುರಿತು ಎರಡು ಕುಟುಂಬಗಳು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದು, ಪುರುಷೋತ್ತಮ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆತನ ಕುಟುಂಬದ ಆಪ್ತವಲಯ ತಿಳಿಸಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ. |