ಮುಂಬೈ ದಾಳಿಯ ಬಗ್ಗೆ ಭಾರತದ ಜತೆ ಸಂಧಾನ ಮಾತುಕತೆ ನಡೆಸುವಂತೆ ಚೀನಾ ಕೇಳಿಕೊಂಡಿರುವ ಪಾಕಿಸ್ತಾನ, ನಾವು ಚೀನಾಗೆ ಸಂಪೂರ್ಣ ಬ್ಲ್ಯಾಂಕ್ ಚೆಕ್ ನೀಡಿತ್ತೇವೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಿಳಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಚೀನಿ ಹೊಸ ವರ್ಷದ ಸಮಾರಂಭದಲ್ಲಿ ಮಾತನಾಡಿದ ಖುರೇಷಿ, ಮುಂಬೈ ದಾಳಿ ಬಗ್ಗೆ ಭಾರತದ ಜತೆ ಸಂಧಾನ ನಡೆಸಲು ಚೀನಾ ಅತ್ಯಂತ ಸಮರ್ಥ ರಾಷ್ಟ್ರ ಎಂದೂ ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ಜತೆ ಸಂಧಾನ ಮಾತುಕತೆಗೆ ನಾವು ನಿಮಗೆ ಸಂಪೂರ್ಣ ಬ್ಲ್ಯಾಂಕ್ ಚೆಕ್ ನೀಡುತ್ತೇವೆ, ನೀವು ಯಾವುದೇ ಕ್ರಮ ಕೈಗೊಂಡರು ಅದನ್ನು ನಾವು ಒಪ್ಪುತ್ತೇವೆ ಎಂದು ತಿಳಿಸಿರುವುದಾಗಿ ಖುರೇಷಿ ಹೇಳಿದರು.
ನಮಗೆ ಚೀನಾದ ಮೇಲೆ ವಿಶ್ವಾಸ ಇದೆ. ಇಸ್ಲಾಮಾಬಾದ್‌ನಲ್ಲಿರುವ ಚೀನಾ ವಿಶೇಷ ರಾಯಭಾರಿಯನ್ನೇ ಈ ಕೆಲಸಕ್ಕೆ ನಿಯೋಜಿಸಬಹುದು ಎಂದು ಚೀನಾ ವಿದೇಶಾಂಗ ಸಚಿವರಿಗೆ ಖುರೇಷಿ ಮನವಿ ಮಾಡಿದ್ದಾರೆ. |