ಕಲಬೆರಕೆ ಹಾಲಿನ ಪುಡಿ ಸರಬರಾಜು ಮಾಡಿ ಸಾವಿರಾರು ಮಕ್ಕಳ ಮೂತ್ರಪಿಂಡಕ್ಕೆ ಕುತ್ತು ತಂದಿದ್ದ ಹಗರಣದ ರೂವಾರಿಗಳಿಬ್ಬರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಮರಣದಂಡನೆ ಘೋಷಿಸಿದೆ.
ಇಲ್ಲಿನ ಶಿಜಾಹುವಾಂಗ್‌ನ ಸ್ಥಳೀಯ ನ್ಯಾಯಾಲಯ ಮಾಜಿ ಜನರಲ್ ಮ್ಯಾನೇಜರ್ ತಿಯಾನ್ ವೆನ್‌ಹುವಾ (66) ಹಾಗೂ ಸಾನ್ಲು ಗ್ರೂಪ್ ಆಫ್ ಕಂಪೆನಿಯ ವರಿಷ್ಠೆಯಾಗಿರುವ ಅವರ ಮೇಲೆ ಗಂಭೀರ ಆರೋಪ ಸಾಬೀತಾಗಿದ್ದು, ಮರಣದಂಡನೆ ವಿಧಿಸಿದೆ. ಅಲ್ಲದೇ ಝಾಂಗ್ ಯುಜುನ್ (40)ಗೂ ಮರಣದಂಡನೆ ನೀಡಲಾಗಿದೆ.
ತಿಯಾನ್ ವೆನ್‌ಹುವಾ, ರಾಸಾಯನಿಕಯುಕ್ತ ಕಲಬೆರಕೆ ಹಾಲಿನ ಪುಡಿ ಉತ್ಪಾದನೆ ಮಾಡಿದ ಪರಿಣಾಮ ಕನಿಷ್ಠ 300,000ಮಕ್ಕಳು ಸೇರಿದಂತೆ ಅಸ್ವಸ್ಥತೆಗೆ ಒಳಗಾಗಿದ್ದರು.
ಅದೇ ರೀತಿ ಝಾಂಗ್ ಕೂಡ ಕಲಬೆರಕೆ ಹಾಲು ಪುಡಿ ಮಾರಾಟದ ಬೃಹತ್ ಅಂಗಡಿಯನ್ನು ಹೊಂದಿದ್ದು, ಆತ ಮಾರಾಟ ಮಾಡಿದ ಸಾನ್ಲು ಹಾಲು ಸೇವಿಸಿದ ಪರಿಣಾಮ ಸ್ವತಃ ಆತನ ಒಂದು ವರ್ಷದ ಮೊಮ್ಮಗಳು ಕೂಡ ಸಾವನ್ನಪ್ಪಿದ್ದಳು. |