ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತ ಒದಗಿಸಿರುವ ಮಾಹಿತಿ ಆಧಾರದ ಮೇಲೆ ಪಾಕಿಸ್ತಾನ ಕೂಡಲೇ ತನಿಖೆಯನ್ನು ಪೂರ್ಣಗೊಳಿಸಿ, ಅದರ ಮಾಹಿತಿಯನ್ನು ಭಾರತ ಹಾಗೂ ಇನ್ನಿತರ ದೇಶಗಳ ಜೊತೆ ವಿನಿಮಿಯ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ಪಾಕ್‌ಗೆ ಭೇಟಿ ನೀಡಿದ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜಾಪ್ ದೇ ಹೂಪ್ ಅವರೊಂದಿಗೆ ಮಾತನಾಡಿದ ಗಿಲಾನಿ, ಆದಷ್ಟು ಶೀಘ್ರ ತನಿಖೆಯನ್ನು ಪೂರ್ಣಗೊಳಿಸಿ ವರದಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಾಹಿತಿಯನ್ನು ನೀಡುವಲ್ಲಿ ಭಾರತ ವಿಳಂಬ ನೀತಿ ಅನುರಿಸಿರುವುದಾಗಿ ಗಿಲಾನಿ ಈ ಸಂದರ್ಭದಲ್ಲಿ ಭಾರತ ವಿರುದ್ಧ ಆರೋಪಿಸಿದರು. ಆ ನಿಟ್ಟಿನಲ್ಲಿ ಪಾಕ್ ತನಿಖೆಯ ವರದಿಯನ್ನು ಕಾಲಮಿತಿಯೊಳಗೆ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಪಶ್ಚಿಮ ಗಡಿಭಾಗದಲ್ಲಿನ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೂಪ್ ಅವರಿಗೆ ಮನವರಿಕೆ ಮಾಡಿದರು. |