ಪ್ಯಾಲೆಸ್ತೇನಿನ ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮತ್ತು ಬ್ರಿಟನ್ ಮೇಲೆ ದಾಳಿ ನಡೆಸಿ ಎಂದು ಅಲ್ ಕೈದಾದ ಅಬು ಯಾಹ್ಯಾ ಅಲ್ ಲಿಬಿ ಮುಸ್ಲಿಮ್ ಉಗ್ರರಿಗೆ ಕರೆ ನೀಡಿದ್ದಾನೆ.
ಪ್ಯಾಲೆಸ್ತೇನಿನಲ್ಲಿರುವ ನಮ್ಮ ಸಹೋದರರ ಮೇಲೆ ಕ್ರಿಮಿನಲ್ ಅಮೆರಿಕ ದಾಳಿ ನಡೆಸುವಲ್ಲಿ ಕುಮ್ಮುಕ್ಕು ನೀಡುತ್ತಿದೆ. ಅದಕ್ಕೆ ತಕ್ಕ ಶಾಸ್ತಿ ಮಾಡಬೇಕೆಂದು ಲಿಬಿ ಆಕ್ರೋಶದ ಮಾತಿನ ವೀಡಿಯೋ ಟೇಪ್‌ನ ಭಾಗವನ್ನು ಎಸ್‌ಐಇಟಿ ಮೊನಿಟರಿಂಗ್ ಗ್ರೂಪ್ ಭಾಷಾಂತರಿಸಿದೆ.
ಭಯೋತ್ಪಾದನೆಯ ಹೆಸರಲ್ಲಿ ಅಮೆರಿಕ ಮತ್ತು ಬ್ರಿಟನ್ ಅಮಾಯಕರ ಮೇಲೆ ಯುದ್ದ ಸಾರುತ್ತಿರುವುದಾಗಿ ಆತ ಕಟುವಾಗಿ ಹೇಳಿದ್ದು, ಇದರಲ್ಲಿ ಬ್ರಿಟನ್ ಕೂಡ ಕ್ರಿಮಿನಲ್ ದೇಶವಾಗಿದೆ. ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾನೆ.
ನಾವು ಇದನ್ನು ಯಾವುದೇ ಕಾರಣಕ್ಕೂ ಮರೆಯಲಾರೆವು, ಆ ನಿಟ್ಟಿನಲ್ಲಿ ನಾವು ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಹೇಳಿದ್ದಾನೆ. ಕಳೆದ ಮೂರು ವಾರಗಳಲ್ಲಿ ಅಲ್ ಕೈದಾ ಹೆಸರಿನಲ್ಲಿ ವೀಡಿಯೋ ಟೇಪ್‌ನ ಮೂರು ಎಚ್ಚರಿಕೆಯ ಸಂದೇಶಗಳು ಬಂದಿದೆ. |