ಮಾನಿಲಾದಲ್ಲಿ 2000ದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಮೂವರು ಆರೋಪಿಗಳಿಗೆ ಶುಕ್ರವಾರ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದರಲ್ಲಿ ಫಿಲಿಫೈನ್ಸ್‌ನ ಶಂಕಿತ ಉಗ್ರನೊಬ್ಬ ಸೇರಿದಂತೆ ಮೂರು ಮಂದಿಗೆ ಅಜೀವ ಕಾರಾಗೃಹವಾಸ ಶಿಕ್ಷೆ ನೀಡಲಾಗಿದೆ. 2000 ಡಿಸೆಂಬರ್ 30ರಂದು ಏಕಕಾಲದಲ್ಲಿ ಸಂಭವಿಸಿದ ಐದು ಬಾಂಬ್ ಸ್ಫೋಟದಲ್ಲಿ 22ಮಂದಿ ಬಲಿಯಾಗಿದ್ದು, 100ಜನರು ಗಾಯಗೊಂಡಿದ್ದರು.
ಈ ವಿಚಾರಣೆಯಲ್ಲಿ ನ್ಯಾಯಾಧೀಶರು ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರಮುಖ ಘಟನೆಯಲ್ಲಿ ಮಾತ್ರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಾದ ಮೊರೋ ಇಸ್ಲಾಮಿಕ್ ಲಿಬರೇಷನ್ ಫ್ರಂಟ್‌ನ ಸೈಫುಲ್ಲಾ ಮೊಕ್ಲಿಸ್ ಯೂನಸ್ ಸ್ಫೋಟಕ ತಜ್ಞನಾಗಿರುವ ಈತ ನ್ಯಾಯಾಧೀಶರ ಎದುರು ತಪ್ಪೊಪ್ಪಿಗೆ ನೀಡಿದ್ದ.
ಮತ್ತಿಬ್ಬರು ಆರೋಪಿಗಳಾದ ಅಬ್ದುಲ್ ಪಾಟಕ್ ಹಾಗೂ ಮಾಮಾಸಾಕುಲ್ ನಾಗಾ ಜೀವಾವಧಿ ಶಿಕ್ಷೆಯ ಬದಲು, ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಮಾಡಿಕೊಂಡ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು. |