ಮುಂಬೈ ಮೇಲಿನ ದಾಳಿಯ ಬಳಿಕ ಎಚ್ಚೆತ್ತುಕೊಂಡಿರುವ ಪಾಕ್ ಮೂಲದ ಜಿಹಾದಿ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾದ ಹಾಫೀಜ್ ಸಯೀದ್ ಹಾಗೂ ಸೈಯದ್ ಸಲಾಹುದ್ದೀನ್ಸ್ ಮುತ್ತಾಹಿದಾ ಜೆಹಾದ್ ಕೌನ್ಸಿಲ್(ಎಂಜೆಸಿ) ಕಾಶ್ಮೀರದ ಕುರಿತು ಹೊಂದಿರುವ ನಿಲುವನ್ನು 'ಮೌಲ್ಯಮಾಪನ' ಮಾಡುವ ಬಗ್ಗೆ ಒಲವು ಹೊಂದಿದೆ.
ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದನಾ ದಾಳಿ ನಂತರ ಪಾಕಿಸ್ತಾನದ ಮೇಲೆ ಜಾಗತಿಕವಾಗಿ ಒತ್ತಡ ಹೆಚ್ಚುತ್ತಿದೆ. ಅಲ್ಲದೇ ಲಷ್ಕರ್ ಶಾಮೀಲಾಗಿರುವುದಾಗಿಯೂ ಆರೋಪಿಸಲಾಗಿದೆ.
ಆ ನಿಟ್ಟಿನಲ್ಲಿ ಇದೀಗ ಕಾಶ್ಮೀರ ವಿಚಾರದಲ್ಲಿ ಹೆಚ್ಚು ಸ್ನೇಹಯುತವಾಗಿ ವರ್ತಿಸುವತ್ತ ಇಚ್ಛೆ ಹೊಂದಿರುವುದಾಗಿ ಜಿಹಾದ್ ಹಿರಿಯ ಮುಖಂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಷ್ಕರ್ ಇ ತೊಯ್ಬಾ ಹಾಗೂ ಎಂಜೆಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದೆ. ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ.
ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದವನ್ನು ಪರಸ್ಪರ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಬಯಕೆ ತಮ್ಮದು ಎಂದು ಸೈಯದ್ ಸಲಾಹುದ್ದೀನ್‌ನ ವಕ್ತಾರ ಎಸಾನ್ ಇಲಾಹಿ ವ್ಯಕ್ತಪಡಿಸಿದ್ದು, ನಮಗೆ ಶಾಂತಿಯುತ ಮಾತುಕತೆ ಬೇಕಾಗಿದೆ. ಅದಲ್ಲದಿದ್ದರೆ ಹೋರಾಟ ಸುಲಭ, ಅದು ಬೇಡದಿದ್ದರೆ ನಮಗೆ ತುಂಬಾ ಸಂತೋಷ. ಹಾಗಂತ ನಾವು ಮಾತುಕತೆ ಮುಂದಾಗುತ್ತಿರುವುದು ದೌರ್ಬಲ್ಯದ ಸಂಕೇತವಲ್ಲ ಎಂದು ತಿಳಿಸಿದ್ದಾನೆ.
ಪ್ರಸ್ತುತ ಆಡಳಿತಾರೂಢ ಪಕ್ಷವಾಗಿರುವ ಪಿಪಿಪಿ ನೇತೃತ್ವದ ಸರ್ಕಾರ ಕಾಶ್ಮೀರ ವಿಚಾರದಲ್ಲಿ ಜಿಹಾದಿಗಳ ಹೋರಾಟಕ್ಕೆ ಬೆಂಬಲ ನೀಡುವುದಿಲ್ಲ ಎಂದು ಎಂಜೆಸಿ ವಕ್ತಾರ ಆರೋಪಿಸಿದ್ದಾನೆ.
ನಮ್ಮದು ಮುಕ್ತ ಕಾಶ್ಮೀರಕ್ಕಾಗಿ ಹೋರಾಟವೇ ವಿನಃ ಬೇರೆನೂ ಇಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಾವುದೇ ಶಸ್ತ್ರ ಸಜ್ಜಿತ ಸಂಘಟನೆಯೊಂದಿಗೆ ನಾವು ಯಾವುದೇ ಸಂಬಂಧ ಹೊಂದಿಲ್ಲ. ಅದಕ್ಕೆ ಪೂರಕ ಎಂಬಂತೆ ಜಾಗತಿಕ ಅಜೆಂಡಾವೂ ನಮ್ಮಲ್ಲಿಲ್ಲ. ನಮಗೆ ಕಾಶ್ಮೀರದಲ್ಲಿ ಸ್ವಾತಂತ್ರ್ಯ ಬೇಕು ಮತ್ತು ಅದು ಶಾಂತಿಯುತವಾಗಿಯೇ ಬರಬೇಕು. ಅದನ್ನು ನಾವು ಸ್ವಾಗತಿಸುತ್ತೇವೆ. ಅದಕ್ಕಾಗಿ ನಾವು ಶಸ್ತ್ರ ಸಜ್ಜಿತ ಹೋರಾಟದ ದೃಷ್ಟಿಕೋನ ನಮ್ಮದಲ್ಲ. ಗುರಿ ತಲುಪುವುದು ಮಾತ್ರ ಮುಖ್ಯ ಧ್ಯೇಯವಾಗಿದೆ ಎಂದು ಲಷ್ಕರ್ ವಕ್ತಾರ ಅಬ್ದುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
|