ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬರಾಕ್ 2ನೇ ಪ್ರಮಾಣ ವಚನ: ಮಾಧ್ಯಮಗಳ ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬರಾಕ್ 2ನೇ ಪ್ರಮಾಣ ವಚನ: ಮಾಧ್ಯಮಗಳ ಆಕ್ರೋಶ
ಆಡಳಿತದಲ್ಲಿ ಪಾರದರ್ಶಕತೆ ನೀಡುವುದಾಗಿ ಮಾತುಕೊಟ್ಟ ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಮಾಮ ಅವರು ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡದಿರುವ ಬಗ್ಗೆ ಟಿವಿ ನ್ಯೂಸ್ ನೆಟ್ ವರ್ಕ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಜನವರಿ 20ರಂದು ಅಮೆರಿಕದ 44ನೇ ಅಧ್ಯಕ್ಷರಾಗಿ ಬರಾಕ್ ಒಬಾಮ ಅವರು ಮುಖ್ಯನ್ಯಾಯಾಧೀಶರಿಂದ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ತಡವರಿಸಿದ ಪರಿಣಾಮ, ಸಂವಿಧಾನ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜ21ರಂದು ಬರಾಕ್ ಅವರು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದ್ದರು.

ಆದರೆ ಈ ಸಂದರ್ಭದಲ್ಲಿ ಯಾವುದೇ ದೃಶ್ಯಮಾಧ್ಯಮಗಳಿಗಾಗಲಿ, ಬೇರೆ ಯಾರಿಗೂ ವಿಶೇಷ ಆಹ್ವಾನ ನೀಡದೆ ಪ್ರಮಾಣವಚನ ಕಾರ್ಯವನ್ನು ನೆರವೇರಿಸಿರುವ ಕುರಿತು ಪ್ರಮುಖ ಮಾಧ್ಯಮಗಳು ಬರಾಕ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿವೆ.

ಆದರೆ ತಾವು ಕೈಗೊಂಡ ಈ ಕಾರ್ಯ ಪಾರದರ್ಶಕ ಎಂದು ನಂಬುತ್ತೇವೆ ಮತ್ತು ಇದರಲ್ಲಿ ಯಾವುದೇ ಅಪಾರ್ಥ ಬೇಡ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ರೋಬರ್ಟ್ ಗಿಬ್ಸ್ ಅಧ್ಯಕ್ಷರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಎರಡನೇ ಬಾರಿ ಪ್ರಮಾಣವಚನ ಸಂದರ್ಭವನ್ನು ಪೂರ್ಣ ಪ್ರಮಾಣದಲ್ಲಿ ಪ್ರಿಂಟ್ ಪೂಲ್ ಮಾಡಲಾಗಿದ್ದು, ಅದರ ಪೋಟೋಗ್ರಾಫ್ಸ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಗಿಬ್ಸ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಜಿಹಾದಿಗಳು 'ಶಸ್ತ್ರ ಸನ್ಯಾಸ'ಕ್ಕೆ ಸಿದ್ದವಂತೆ!
ಮಾನಿಲ ಬಾಂಬ್ ಸ್ಫೋಟ: ಮೂವರಿಗೆ ಜೀವಾವಧಿ ಶಿಕ್ಷೆ
ಅಮೆರಿಕ-ಬ್ರಿಟನ್ ಮೇಲೆ ದಾಳಿ ನಡೆಸಿ: ಅಲ್ ಕೈದಾ ಕರೆ
ಮುಂಬೈ ದಾಳಿ: ತನಿಖೆ ಶೀಘ್ರವೇ ಪೂರ್ಣ-ಗಿಲಾನಿ
ಪಾಕ್-ಅಫ್ಘಾನ್‌ನಲ್ಲಿನ ಭಯೋತ್ಪಾದನೆ ಅಪಾಯಕಾರಿ: ಒಬಾಮ
ಚೀನಾ-ಕಲಬೆರಕೆ ಹಾಲು: ಇಬ್ಬರಿಗೆ ಗಲ್ಲು ಶಿಕ್ಷೆ