ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ 'ಸಲ್ವಾರ್' (ಷರಾಯಿ) ಅನ್ನು ಮೇಲಕ್ಕೆ ಎತ್ತದೆ ಇದ್ದ ಕಾರಣಕ್ಕೆ ಪಾಕ್‌ನ ಸ್ವಾಟ್ ಕಣಿವೆಯೊಂದರ ಶಿಕ್ಷಕರೊಬ್ಬರನ್ನು ತಾಲಿಬಾನ್ ಉಗ್ರಗಾಮಿಗಳು ಗುಂಡಿಟ್ಟು ಕೊಂದ ಘಟನೆ ನಡೆದಿದೆ.
ಆದರೆ ಈಗಾಗಲೇ ಹಲವಾರು ವಿಷಯಗಳ ಕುರಿತು ತಾಲಿಬಾನ್ ಫತ್ವಾ ಹೊರಡಿಸಿದ್ದರೂ ಕೂಡ, ಈ ಕುರಿತಾಗಿ ತಾಲಿಬಾನ್ ಈ ಹಿಂದೆ ಯಾವುದೇ ಫರ್ಮಾನು ಹೊರಡಿಸಿರಲಿಲ್ಲವಾಗಿತ್ತು.
ಮುಜಾಹಿದ್ದೀನ್‌ನ ಮಾಜಿ ಸದಸ್ಯರಾಗಿರುವ ಅಮ್‌ಜಾದ್ ಇಸ್ಲಾಮ್ ಅವರು ಸ್ವಾಟ್ ಕಣಿವೆಯೊಂದರ ಕಣಿವೆಯೊಂದರ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಹಿಮ್ಮಡಿ ಗಂಟಿನಿಂದ ಸಲ್ವಾರ್ ಅನ್ನು ಮೇಲಕ್ಕೆ ಎತ್ತದೆ ಇದ್ದ ಕಾರಣಕ್ಕಾಗಿಯೇ ಅವರನ್ನು ಗುಂಡಿಟ್ಟು ಸಾಯಿಸಲಾಗಿದೆ ಎಂದು ಅಮ್‌ಜಾದ್ ತಂದೆ ಗನಿ ಅಕ್ಬರ್ ವಿವರಿಸಿದ್ದಾರೆ. ಈ ಬಗ್ಗೆ ತಾಲಿಬಾನ್ ಕಳೆದ ವಾರ ಸಲ್ವಾರ್ ಅನ್ನು ಮೇಲಕ್ಕೆ ಎತ್ತದಿರುವಂತೆ ಎಚ್ಚರಿಕೆಯನ್ನು ನೀಡಿತ್ತು. ಆದರೆ ಈ ಬಗ್ಗೆ ನೀವು ಬಲವಂತ ಮಾಡಬಾರದು ಎಂಬುದಾಗಿ ಇಸ್ಲಾಮ್ ತಿರುಗೇಟು ನೀಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಅವರ ಈ ವಾದವೇ ಅವರ ಜೀವಕ್ಕೆ ಮುಳುವಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. |