ಕುಟಂಬ ಯೋಜನೆ ಸಂಘಟನೆಗಳಿಗೆ ನೀಡುತ್ತಿದ್ದ ಆರ್ಥಿಕ ನೆರವಿನ ಮೇಲೆ ಕಳೆದ ಎಂಟು ವರ್ಷಗಳಿಂದ ಹೇರಿದ್ದ ನಿಷೇಧವನ್ನು ನೂತನ ಅಧ್ಯಕ್ಷ ಬರಾಕ್ ಒಮಾಮ ಅವರು ರದ್ದುಗೊಳಿಸಿರುವುದಾಗಿ ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಗರ್ಭಪಾತಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿನ ನಿಷೇಧ ಆದೇಶವನ್ನು ಬರಾಕ್ ರದ್ದುಗೊಳಿಸಿ ಹೊಸ ಆದೇಶಕ್ಕೆ ಸಹಿ ಹಾಕಿರುವುದಾಗಿ ಶ್ವೇತಭವನದ ವಕ್ತಾರ ಬಿಲ್ ಬರ್ಟೊನ್ ತಿಳಿಸಿದ್ದು, ಒಬಾಮ ಅವರು ಅಧ್ಯಕ್ಷಗಾದಿ ಏರಿದ ಮೂರನೇ ದಿನವಾದ ಶುಕ್ರವಾರ ಕೈಗೊಂಡ ಮಹತ್ವದ ನಿರ್ಧಾರ ಇದಾಗಿದೆ ಎಂದು ವಿವರಿಸಿದ್ದಾರೆ.
ಎಲ್ಲಾ ಷರತ್ತುಗಳನ್ನು ರದ್ದುಗೊಳಿಸಿದ್ದು,ಈ ಕುರಿತು ಅಮೆರಿಕದ ಆರೋಗ್ಯ ಇಲಾಖೆಗಳು ಆದೇಶವನ್ನು ಸ್ವೀಕರಿಸಿದ್ದು, ಇದೊಂದು ಉತ್ತಮವಾದ ಬೆಳವಣಿಗೆ ಎಂದು ಪ್ಲ್ಯಾನ್ಡ್ ಪೇರೆಂಟ್‌ಹುಡ್ ಫೆಡರೇಶನ್ ಆಫ್ ಅಮೆರಿಕದ(ಪಿಪಿಎಫ್ಎ) ವಕ್ತಾರೆ ಟೈಟ್ ಸೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು 2001ರಲ್ಲಿ ಅಧ್ಯಕ್ಷಪಟ್ಟ ಏರಿದ ಮೇಲೆ, ಕುಟುಂಬ ಯೋಜನೆ ಸಂಘಟನೆಗಳಿಗೆ ನೀಡುತ್ತಿದ್ದ ಆರ್ಥಿಕ ನೆರವಿನ ಮೇಲೆ ನಿಷೇಧ ಹೇರಿದ್ದರು. |