ಕಾಶ್ಮೀರ ವಿವಾದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ, ಭಾರತ ಮತ್ತು ಪಾಕಿಸ್ತಾನಗಳೇ ದ್ವಿಪಕ್ಷೀಯವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಬ್ರಿಟನ್ ವಿದೇಶಾಂಗ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಭಾರತಕ್ಕೆ ಮಿಲಿಬ್ಯಾಂಡ್ ಭೇಟಿ ನೀಡಿದಾಗ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಆಡಿದ ಕೆಲವು ಮಾತುಗಳು ಭಾರತದಲ್ಲಿ ತೀವ್ರ ವಿವಾದ ಹುಟ್ಟು ಹಾಕಿದ್ದವು.
ಆದ್ದರಿಂದ ವಿವಾದ ತಣ್ಣಗಾಗಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯದ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಭಾರತ-ಪಾಕಿಸ್ತಾನಗಳಿಗೆ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಬ್ರಿಟನ್ ಒತ್ತಾಯ ಮಾಡಿದೆ. ಏಕೆಂದರೆ ಕಾಶ್ಮೀರದಲ್ಲಿನ ಶಾಂತಿ ನೆಲೆಸುವುದು ಈ ಭಾಗದ ಭದ್ರತೆಗೆ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದೆ. |