ನೂತನವಾಗಿ ಅಧ್ಯಕ್ಷಪಟ್ಟ ಏರಿರುವ ಬರಾಕ್ ಒಬಾಮ ಅವರ ಆಡಳಿತರೂಢ ಸರ್ಕಾರ ನೆರೆಯ ಕ್ಯೂಬಾದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಕ್ಯಾಬಾ ಆಗ್ರಹಿಸಿರುವುದಾಗಿ ಎಎಫ್‌ಇ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ಮಾನವೀಯ ನೆಲೆಯಲ್ಲಿ ನಾವು ಮುಖಾಮುಖಿ ಮಾತುಕತೆಗೆ ಸಿದ್ದ,ಆದರೆ ಮಾತುಕತೆಗೆ ಕ್ಯೂಬಾವೇ ಮುಂದಾಗುವುದಿಲ್ಲ ಎಂದು ಕ್ಯೂಬಾ ವಿದೇಶಾಂಗ ಸಚಿವ ಫಿಲಿಪ್ ಪೆರೆಜ್ ರೋಕ್ ಗ್ವಾಟೆಮಾಲಾ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದೊಂದಿಗೆ ಗೌರವಯುತ ಸಂಬಂಧ ಹೊಂದುವಲ್ಲಿ ಕ್ಯೂಬಾ ಆಸಕ್ತಿ ಹೊಂದಿದೆ ಎಂದ ಅವರು, ಹವಾನಾದ ಬಗ್ಗೆ ಅಮೆರಿಕದ ನೀತಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಿಬೇಕಾಗಿದೆ. ಅದರಲ್ಲಿ ಮುಖ್ಯವಾಗಿ 1962ರಲ್ಲಿಯೇ ಕಮ್ಯೂನಿಷ್ಟ್ ಆಡಳಿತರೂಢ ದ್ವೀಪರಾಷ್ಟ್ರದ ಮೇಲೆ ಅಮೆರಿಕ ಹೇರಿದ್ದ ಆರ್ಥಿಕ ದಿಗ್ಬಂಧನ ಹೇರಿದ್ದನ್ನು ರದ್ದುಪಡಿಸಬೇಕು ಎಂಬುದಾಗಿಯೂ ಈ ಸಂದರ್ಭದಲ್ಲಿ ಒತ್ತಾಯಿಸಿದರು. |