ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಆಡಳಿತದಲ್ಲಿ ಮಹಿಳೆಯರದ್ದೇ 'ಪಾರುಪತ್ಯ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಆಡಳಿತದಲ್ಲಿ ಮಹಿಳೆಯರದ್ದೇ 'ಪಾರುಪತ್ಯ'
ನೂತನವಾಗಿ ಅಮೆರಿಕ ಅಧ್ಯಕ್ಷ ಗಾದಿ ಏರಿರುವ ಬರಾಕ್ ಒಬಾಮ ಅವರ ಆಡಳಿತದಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್, ವಲೇರಿ ಜಾರ್ರೆಟ್ಟ್ ಹಾಗೂ ಜಿಲ್ಲ್ ಬಿಡೆನ್ ಸೇರಿದಂತೆ ಹಲವು ಮಹಿಳೆಯರು ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದಾರೆ.

ಒಬಾಮ ತಮ್ಮ ಆಡಳಿತದಲ್ಲಿ ಮಹಿಳಾವಾದಿಗಳಿಗೆ ಹಚ್ಚಿನ ಮಣೆ ಹಾಕಿರುವುದಾಗಿ ಎಂಎಸ್ ಮ್ಯಾಗಜೀನ್ ಲೇಖನದಲ್ಲಿ ವಿವರಿಸಲಾಗಿದೆ. ಅಮೆರಿಕದ ರಾಜಕಾರಣದಲ್ಲಿ ಮಹಿಳೆಯರ ಶಕೆ ಆರಂಭವಾಗಿದೆಯೇ ಎಂಬಷ್ಟರ ಮಟ್ಟಿಗೆ. ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ. ಆ ನಿಟ್ಟಿನಲ್ಲಿ ಆಡಳಿತದ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಹಿಲರಿ ಕ್ಲಿಂಟನ್: ಹಿಲರಿ ಪರಿಚಯದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ, 61ರ ಹರೆಯದ ಹಿಲರಿ ಕ್ಲಿಂಟನ್ ಅವರು, ಒಬಾಮ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದಾರೆ. ದೇಶದ ಎರಡನೇ ಪ್ರತಿಷ್ಠಿತ ಹುದ್ದೆ ಎಂದೇ ಪರಿಗಣಿತವಾಗಿದ್ದ ವಿದೇಶಾಂಗ ಹುದ್ದೆ ಹಿಲರಿ ಕೈಯಲ್ಲಿದೆ.

ಜಿಲ್ಲ್ ಬಿಡೆನ್: ಅಮೆರಿಕದ ಉಪಾಧ್ಯಕ್ಷರಾಗಿರುವ ಜೋಯ್ ಬಿಡೆನ್ ಅವರ ಪತ್ನಿಯಾಗಿರುವ ಜಿಲ್ಲ್ ಬಿಡೆನ್(57), ಒಬಾಮ ಅಧಿಕೃತವಾಗಿ ಯಾವುದೇ ಹುದ್ದೆ ಅಲಂಕರಿಸಿಲ್ಲ, ಆದರೆ ತಾನು ಮಾದರಿ ಮಹಿಳೆಯಾಗುವುದಾಗಿ ಭರವಸೆ ನೀಡಿದ್ದಾರೆ. ಇದೀಗ ವಾಷಿಂಗ್ಟನ್‌ನಲ್ಲಿ ಶಿಕ್ಷಕ ವೃತ್ತಿ ಮಾಡಲು ಎದುರು ನೋಡುತ್ತಿದ್ದಾರೆ.

ಜಾನೆಟ್ ನಾಪೋಲಿಟಾನೋ: ನಾಪೋಲಿಟಾನೋ(51) ನ್ಯೂಯಾರ್ಕ್ ಮೂಲದ ಇಟಲಿಯ ಅಮೆರಿಕ ನಿವಾಸಿಯಾಗಿರುವ ಕಾನೂನು ಪದವೀಧರೆಯಾಗಿರುವ ಅವರು ಹೋಮ್‌ಲ್ಯಾಂಡ್‌ ರಕ್ಷಣಾ ಕಾರ್ಯದರ್ಶಿಯಾಗಿದ್ದಾರೆ.

ಸೂಸಾನ್ ರೈಸ್: ಸೂಸಾನ್ ರೈಸ್ (44ವ) ಕೂಡ ಒಬಾಮ ಆಡಳಿತದಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಹುದ್ದೆ ನಿರ್ವಹಿಸುತ್ತಿದ್ದಾರೆ. ಈ ಮೊದಲು ಬಿಲ್ ಕ್ಲಿಂಟನ್ ಆಡಳಿತಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮೊದಲ ಬಾರಿಗೆ ಆಫ್ರಿಕನ್ ಅಮೆರಿಕಾದ ಮಹಿಳೆಯೊಬ್ಬರು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಹುದ್ದೆ ಅಲಂಕರಿಸಿದಂತಾಗಿದೆ.

ಲಿಸಾ ಜಾಕ್ಸನ್: ಎನ್ವಾಯರ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ವರಿಷ್ಠೆಯಾಗಿರುವ ಲಿಸಾ ಜಾಕ್ಸನ್ (46) ಪ್ರಿನ್ಸ್‌‌ಟನ್ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರ್‌ನಲ್ಲಿ ಪದವಿ ಪಡೆದಿದ್ದರು.

ಹಿಲ್ಡಾ ಸೋಲಿಸ್: ಕ್ಯಾಲಿಫೋರ್ನಿಯಾದಲ್ಲಿ ಜನಿಸಿರುವ ಹಿಲ್ಡಾ (51) ನಿಕಾರಾಗುವಾ ಮತ್ತು ಮೆಕ್ಸಿಕೋದಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ಇದೀಗ ಒಬಾಮ ಆಡಳಿತದಲ್ಲಿ ಲೇಬರ್ ಸೆಕ್ರೆಟರಿಯಾಗಿದ್ದಾರೆ.

ವಲೇರಿ ಜಾರ್ರೆಟ್ಟ್: ಹಿರಿಯ ಸಲಹೆಗಾರ್ತಿಯಾಗಿರುವ ವಲೇರಿ ಜಾರ್ರೆಟ್ಟ್ (52) ಒಬಾಮ ಅವರ ಆಪ್ತಮಿತ್ರರಲ್ಲಿ ಒಬ್ಬರಾಗಿದ್ದಾರೆ. ಇದೀಗ ಹಿರಿಯ ಸಲಹೆಗಾರರ ಪಟ್ಟ ವಲೇರಿಯವರದ್ದು.

ಡೆಸಿರ್ರೆ ರೋಜರ್ಸ್: ಶ್ವೇತಭನದ ಸಾಮಾಜಿಕ ಕಾರ್ಯದರ್ಶಿಯಾಗಿರುವ ಡೆಸಿರ್ರೆ ರೋಜರ್ಸ್(49).
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ:ಗಿಲಾನಿ
ಪ್ರಭಾಕರನ್ ಮೂರು ವಿಮಾನ ಧ್ವಂಸ: ಟೈಮ್ಸ್
ಸಂಬಂಧ ಗಟ್ಟಿಗೊಳಿಸಲು ಕ್ಯೂಬಾ ಅಮೆರಿಕಕ್ಕೆ ಒತ್ತಾಯ
ಕಸಬ್ ಶಾಮೀಲಾತಿ ತನಿಖೆ ಶೀಘ್ರವೇ ಪೂರ್ಣ: ಪಾಕಿಸ್ತಾನ
ಕಾಶ್ಮೀರ ವಿವಾದದ ಬಗ್ಗೆ ಮೂಗು ತೂರಿಸುವುದಿಲ್ಲ: ಬ್ರಿಟನ್
ಕುಟುಂಬ ಯೋಜನೆ-ಆರ್ಥಿಕ ನೆರವು ನಿಷೇಧ ರದ್ದು: ಬರಾಕ್